ಬಲವಂತದ ಭೂ ಸ್ವಾಧೀನ ಮಾಡದಿರಿ

09.HBH 3
Published on

ಹಗರಿಬೊಮ್ಮನಹಳ್ಳಿ: ಸರ್ಕಾರದ ನೀತಿಗಳ ವಿರುದ್ಧ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ ನಡೆಯಿತು.

ಸಿಐಟಿಯು ಜಿಲ್ಲಾ ಸಂಚಾಲಕ ಆರ್.ಎಸ್.ಬಸವರಾಜ ಮಾತನಾಡಿ, ಕಾರ್ಮಿಕರ ಕಾನೂನುಗಳಿಗೆ ಕತ್ತರಿ ಹಾಕುವ ಕೆಲಸ ಸರ್ಕಾರ ಮ ಮಾಡುತ್ತಿದೆ. 29 ಕಾನೂನುಗಳನ್ನು ಕಡಿತಗೊಳಿಸಿ, 4ಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ಭದ್ರತೆ ಇರುವುದಿಲ್ಲ. ಕೂಡಲೆ ಈ ಆದೇಶವನ್ನು ಹಿಂಪಡೆಯಬೇಕು. ರೈತರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಮಾಡಿಕೊಳ್ಳಬಾರದು. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ತಾಲೂಕು ಸಂಚಾಲಕ ಎಸ್.ಜಗನ್ನಾಥ ಮಾತನಾಡಿ, ಕಾರ್ಮಿಕರಿಗೆ ಕನಿಷ್ಠ 35 ಸಾವಿರ ರೂ. ವೇತನ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು, ಅರಣ್ಯ ನಿವಾಸಿಗಳ ತೆರವುಗೊಳಿಸಲು ಕೇಂದ್ರ ಸರ್ಕಾರ ಅನುಮತಿ ನೀಡುವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಗೋಣೆಪ್ಪ, ದಲಿತ ಹಕ್ಕುಗಳ ಸಮಿತಿಯ ಬಿ.ಮಾಳಮ್ಮ, ರಾಜ್ಯ ಪ್ರಾಂತರೈತ ಸಂಘದ ಸಂಚಾಲಕ ಕೊಟಿಗಿ ಮಲ್ಲಿಕಾರ್ಜುನ, ಸಿಐಟಿಯುನ ಟಿ.ಲಕ್ಷ್ಮಣ, ಯು.ತೋಟೇಶ, ಕೆ.ಗೌರಮ್ಮ, ಕರ್ನಾಟಕ ಪ್ರಾಂತ ರೈತ ಸಂಘದ ಎಂ.ಆನಂದ, ಕೆ.ಗಾಳೆಪ್ಪ, ಸಂತ ಶಿಶುನಾಳ ಷರೀಫ್ ಮಹಾವೇದಿಕೆಯ ತಾಲೂಕು ಅಧ್ಯಕ್ಷ ಸೈಯದ್ ಇರ್ಫಾನ್, ಎಸ್‌ಎಫ್‌ಐನ ಗುಳೇದ ಬಸವರಾಜ, ಮಾರೆಕ್ಕ, ಸೌಭಾಗ್ಯಮ್ಮ, ಗಿರಿಜಮ್ಮ, ನಿವೃತ್ತ ನೌಕರರ ಸಂಘದ ಈ.ಕೆ.ಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net