ಬಲಮುರಿಯಲ್ಲಿ ನಿರ್ಬಂಧ ಉಲ್ಲಂಘಿಸಿದ ಪ್ರವಾಸಿಗರು

01-01--krs1 (3)
Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಳಿ ಬಲಮುರಿ ಪ್ರವಾಸಿ ತಾಣಕ್ಕೆ ತಹಸೀಲ್ದಾರ್ ಪ್ರವೇಶ ನಿರ್ಬಂಧ ವಿಧಿಸಿದ್ದರೂ ಪ್ರವಾಸಿಗರು ಕಾವೇರಿ ನದಿಯಲ್ಲಿ ಈಜಾಡಿದರಲ್ಲದೆ, ಕಟ್ಟೆಯ ಅಪಾಯದ ಸ್ಥಳದಲ್ಲಿ ಓಡಾಡಿದರು.


ಬಲಮುರಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟೆಯ ಮಧ್ಯಭಾಗದ ನೀರಿನಲ್ಲಿ ನಿಂತು ಸೆಲ್ಫಿ ತೆಗೆದುಕೊಂಡರು.


ಎಡಮುರಿ ಮತ್ತು ಬಲಮುರಿ ಪ್ರವಾಸಿ ತಾಣದ ಪ್ರವೇಶ ದ್ವಾರದಲ್ಲಿ ಕೆ.ಆರ್.ಸಾಗರ ಪೊಲೀಸರು ಮತ್ತು ಹೋಂ ಗಾರ್ಡ್‌ಗಳು, ತಹಸೀಲ್ದಾರ್ ಆದೇಶದ ಫ್ಲೆಕ್ಸ್ ತೋರಿಸಿ ನೂರಾರು ಪ್ರವಾಸಿಗರ ಮನವೊಲಿಸಿ ಕಳುಹಿಸಿದರು.


ಕೆಲವರು ಬಲಮುರಿ ಪ್ರವಾಸಿ ತಾಣದ ಒಳಭಾಗಕ್ಕೆ ಪೊಲೀಸರಿಗೆ ಕಾಣದಂತೆ ಗದ್ದೆಗಳ ಮೂಲಕ ತೆರಳಿ ನದಿಯಲ್ಲಿ ಈಜುತ್ತಾ ಮೋಜು ಮಾಡಿದರು. ನಂತರ ಗಸ್ತಿಗೆ ಬಂದ ಪೋಲಿಸರು ಈಜಾಡುತ್ತಿದ್ದ ಪ್ರವಾಸಿಗರಿಗೆ ನದಿಯಿಂದ ಹೊರ ಬರಲು ತಿಳಿಸಿ ಬುದ್ಧಿವಾದ ಹೇಳಿ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net