

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಬಲಭೀಮೇಶ್ವರ (ಹನುಮಾನ) ದೇವರ (ಚಟ್ಟಿ) ಕಾರ್ತಿಕೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ರಾತ್ರಿ ನೆರವೇರಿತು.
ಕಾರ್ತಿಕೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಸ್ಥಾನ ವಿವಿಧ ಬಣ್ಣದ ವಿದ್ಯುತ್ ಅಲಂಕಾರ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಾತ್ರಿ 8 ಗಂಟೆಯಿಂದ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಇಡೀ ರಾತ್ರಿ ಖಾನಾಪೂರ, ಹಿರೇಅಲ್ಲಾಪೂರ, ಹೊನ್ನಳ್ಳಿ, ಮಾಗಣಗೇರಾ, ಕಣಮೇಶ್ವರ ಭಜನಾ ಮಂಡಳಿಯವರು ಭಜನಾ ಸೇವೆ ಸಲ್ಲಿಸಿದರು.
ಅರ್ಚಕರಾದ ನಿಂಗಣ್ಣಾಚಾರ್ಯ ಜೋಶಿ, ಸಿದ್ದಯ್ಯ ಮಠ, ಮುಖಂಡ ರುದ್ರಣ್ಣಸಾಹು ಮಾನಶೆಟ್ಟಿ, ಕಮಿಟಿ ಅಧ್ಯಕ್ಷ ರೇವಣಸಿದ್ದಸಾಹು ಕೋರವಾರ, ಮಲ್ಲಿಕಾರ್ಜುನ ಮನಗೂಳಿ, ದೇವೀಂದ್ರ ತೊನಶ್ಯಾಳ, ಚಂದ್ರಶೇಖರ ಮನಗೂಳಿ, ಎಚ್.ಕೆ.ಸೀತನೂರ, ಬಾಲಚಂದ್ರ ಕರಿಕಲ್‌ಲ್, ಎಸ್.ವೈ.ಅಮರಗೋಳ, ನಡಗೇರಪ್ಪ ತಳವಾರ, ಮಲ್ಲಿಕಾರ್ಜುನ ಕೋಟಾರಗಸ್ತಿ,ನಾನಾಗೌಡ ಪಾಟೀಲ, ಮಲ್ಲಪ್ಪ ಪೂಜಾರಿ, ನಾಗಣ್ಣ ಪಡೇಕನೂರ, ಕರೆಪ್ಪ ಅಮರಗೋಳ, ಶಿವಪ್ಪ ಕರಿಕಲ್, ಡಿ.ಬಿ.ಸೀತನೂರ, ವೀರಭದ್ರ ಬಡಿಗೇರ, ಲಾಲಸಾ ರಾಜಾಕೋಳ, ಚಂದ್ರಶೇಖರ ಕೆಂಭಾವಿ, ಮನೋಹರ ಗುಡಿಮನಿ, ಅಂಬ್ರುತ್ ದೊಡ್ಡಮನಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.