ಬರಿದಾಬಾದ್ ಗೆ ಖಾಶೆಂಪುರ ಭೇಟಿ

baridabad - Copy
Published on

ಬೀದರ್: ಕಲುಷಿತ ನೀರು ಸೇವಿಸಿ ಜನ ಅಸ್ವಸ್ಥತರಾದ ತಾಲೂಕಿನ ಬರಿದಾಬಾದ್ ಗ್ರಾಮಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಭೇಟಿ ನೀಡಿದರು.
ಅಸ್ವಸ್ಥರಾದವರ ಬಗ್ಗೆ ಮಾಹಿತಿ ಪಡೆದ ಖಾಶೆಂಪುರ, ಗ್ರಾಮದ ಕುಡಿವ ನೀರಿನ ಮೂಲಕ ಹಾಗೂ ಚರಂಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಕುಡಿವ ನೀರಿನ ಪೂರೈಕೆ ವಿಚಾರದಲ್ಲಿ ಅಕಾರಿಗಳು ಬಹಳ ಎಚ್ಚರವಹಿಸಬೇಕು. ಕಲುಷಿತ ನೀರು ಪೂರೈಕೆ ಪ್ರಕರಣಗಳು ಸಂಭವಿಸಿದಂತೆ ಸ್ಥಳೀಯ ಗ್ರಾಪಂ ಗಮನ ಹರಿಸಬೇಕು. ಗ್ರಾಮಸ್ಥರು ಸಹ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಪಿಡಿಒ ಹಣಮಂತ, ಮುಖಂಡರಾದ ಘಾಳೆಪ್ಪ, ಸಂಜುಕುಮಾರ, ತುಕರಾಮ, ಅಶೋಕ, ಶ್ರೀಕಾಂತ ಮಾಸ್ಟರ್, ನಾಗೇಶ ಚಟ್ನಳ್ಳಿ, ಮಾರುತಿ, ರಾಜಕುಮಾರ, ಮಾಣಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net