ಬರವಣಿಗೆಯಲ್ಲಿ ಬಾಬಾಸಾಹೇರ ನೋಡಿ

2804KLB11
Published on

ಕಲಬುರಗಿ: ಡಾ.ಬಿ.ಆರ್​.ಅಂಬೇಡ್ಕರ್​ ಬಹುಮುಖ ಪ್ರತಿಭೆಯಾಗಿದ್ದು, ನೀರಾವರಿ ಬ್ಯಾಂಕ್​, ಮಹಿಳಾ ವಿಮೋಚನೆ ಮತ್ತು ರಾಜಕೀಯ ಸೇರಿ ಹಲವು ೇತ್ರದಲ್ಲಿ ಬದಲಾವಣೆಗೆ ಮುನ್ನುಡಿ ಬರೆದಿದ್ದರು. ಅವರ ಬರಹಗಳ ಅಧ್ಯಯನ ಮಾಡಬೇಕು ಎಂದು ಡಾ.ಅನಿಲ ಟೆಂಗಳಿ ತಿಳಿಸಿದರು.

ಕಲ್ಯಾಣ ರ‍್ನಾಟಕ ಸಮರಸೇನೆಯಿಂದ ನಗರದ ಕಲಾಮಂಡಳದಲ್ಲಿ ಇತ್ತೀಚೆಗೆ ರ‍್ಪಡಿಸಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ೧೩೪ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪಾಲಿಕೆ ಮಾಜಿ ಸದಸ್ಯ ಗಣೇಶ ವಳಕೇರಿ ಮಾತನಾಡಿ, ಜ್ಞಾನಿ ಅಂಬೇಡ್ಕರ್​ ಸಂವಿಧಾನದಿಂದಲೇ ಮೀಸಲಾತಿಯ ನ್ಯಾಯ ದೊರಕಿದೆ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಮಾತನಾಡಿ, ಬುದ್ಧ ಬಸವ ಹಾಗೂ ಡಾ.ಬಿ.ಆರ್​.ಅಂಬೇಡ್ಕರ್​ ಯುವಕರಿಗೆ ಮಾದರಿಯಾಗಿದ್ದು, ಅವರಂತೆ ಶಿತರಾದಾಗ ಮಾತ್ರ ಸಾಧನೆ ಸಾಧ್ಯ ಎಂದರು.

ಸೇನೆ ಅಧ್ಯಕ್ಷ ಮಂಜುನಾಥ ನಾಲವಾರಕರ್​ ಮಾತನಾಡಿ, ಸಂವಿಧಾನ ರ‍್ವ ಮೌಲ್ಯ ಹೊಂದಿದೆ ಎಂದರು. ವಿವಿಧ ೇತ್ರದ ೧೦ ಸಾಧಕರಿಗೆ ಪ್ರಬುದ್ಧ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾಂಗ್ರೆಸ್​ ಮುಖಂಡ ನಿಲಕಂಠರಾವ ಮೂಲಗೆ, ವಿಜಯಕುಮಾರ ಕಟ್ಟಿಮನಿ, ಸಂಪತ್​ಕುಮಾರ ವಳಕೇರಿ, ಸಚಿನ್​ ರಹತಾಬಾದ್​ ಇತರರಿದ್ದರು. ವೀರಭದ್ರಪ್ಪ ಅರಿಕೇರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net