ಬರಪೀಡಿತ ಜಿಲ್ಲೆ ಘೋಷಿಸಲು ರೈತರ ಒತ್ತಾಯ

web1
ಬೆಳಗಾವಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕೆಂದು ರೈತರು ಮನವಿ ಸಲ್ಲಿಸಿದರು. ಗೌಡಪ್ಪಗೌಡ ಪಾಟೀಲ, ಯಲ್ಲಪ್ಪ ಕಂಬಳಿ, ಮಹಾದೇವ ಅಮಾತೆ, ಯಲ್ಲನಾಯ್ಕ ಪಾಟೀಲ ಇತರರು ಇದ್ದರು.
Published on

ಬೈಲಹೊಂಗಲ: ಉಪವಿಭಾಗ ಸೇರಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಈಚೆಗೆ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಪಾಟೀಲ ಹಾಗೂ ತಾಲೂಕಾಧ್ಯಕ್ಷ ಯಲ್ಲಪ್ಪ ಕಂಬಳಿ ಮಾತನಾಡಿ, ಸಕಾಲಕ್ಕೆ ಮಳೆ ಬಾರದೆ ಬಿತ್ತನೆ ಆಗದೇ ರೈತರು ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಬಗರಹುಕುಂ ಸಾಗುವಳಿದಾರರಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿದ ರೈತರಿಗೆ ಹಕ್ಕು ಪತ್ರ ನೀಡಬೇಕು. ನೂತನ ಯರಗಟ್ಟಿ ತಾಲೂಕಿಗೆ ಯಾವುದೇ ಕಚೇರಿ ಬಂದಿಲ್ಲ. ಕಚೇರಿ ಸ್ಥಾಪಿಸಬೇಕು. ಅಲ್ಲಿ ಭೂ ನ್ಯಾಯ ಮಂಡಳಿ ನಿರ್ಮಿಸಿಲ್ಲ. ಕೂಡಲೇ ಈ ಕೆಲಸವಾಗಬೇಕು. ಮಲ್ಲಾಪುರ ಗ್ರಾಮದ ರೈತರಿಗೆ ನಿವೇಶನ ಹಾಗೂ ಮನೆ ಮಂಜೂರ ಮಾಡಬೇಕು ಎಂದು ಆಗ್ರಹಿಸಿದರು.
ಮಹಾದೇವ ಅಮಾತೆ, ಯಲ್ಲನಾಯ್ಕ ಪಾಟೀಲ, ಮಂಜುನಾಥ ಮುರಗೋಡ, ಹಣಮಂತರಾಯ ದೇಸಾಯಿ, ದುಂಡಪ್ಪ ಲಾಳಸಿಂಗಿ, ಹೂವಕ್ಕ ಹಡಪದ, ರುಕಮವ್ವ ಸವಳಗಿ, ರೇಣುಕಾ ಕುಕ್ಕಾಳಿ, ನಾಗವ್ವ ನಾಯ್ಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net