ಬರಗೇರಮ್ಮ ದೇವಿಗೆ ಸ್ವೀಟ್ಸ್‌ಗಳಿಂದ ಅಲಂಕಾರ

Baragerammadevi
Published on

ಚಿತ್ರದುರ್ಗ: ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ಸಾವಿರಾರು ಚೆರ್ರಿ, ದ್ರಾಕ್ಷಿ, ನೂರಾರು ಲಾಡು, ಪೇಡಾ, ವಿವಿಧ ವರ್ಣದ ಬರ್ಫಿ ಒಳಗೊಂಡು ಹಲವು ಸ್ವೀಟ್ಸ್‌ಗಳಿಂದ ವಿಶೇಷ ಅಲಂಕಾರ ಸೇವೆ ಜರುಗಿತು.

ದೇಗುಲ ಗ್ರಾಮೀಣ ಸೊಗಡಿನೊಂದಿಗೆ ಭಕ್ತರನ್ನು ಆಕರ್ಷಿಸಿತು. ಆವರಣ ಮುಂಭಾಗ ಕಬ್ಬಿನ ಜಲ್ಲೆಯ ರಾಶಿ, ಬೆಲ್ಲದ ಅಚ್ಚಿನ ರಾಶಿ, ಸುತ್ತಲೂ ಹಲವು ಪದಾರ್ಥಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net