

ಚಿತ್ರದುರ್ಗ: ನವರಾತ್ರಿ ಮಹೋತ್ಸವದ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ನಿತ್ಯ ಬೆಳಗ್ಗೆ 5.30ಕ್ಕೆ ದೇವಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಪೂಜೆ ಜರುಗಲಿದೆ. ಗುರುವಾರ ದೇವಿಯ ನೂತನ ಬೆಳ್ಳಿ ಮುಖ ಪದ್ಮ ಲೋಕಾರ್ಪಣೆಯಾಯಿತು.
ಶುಕ್ರವಾರ ಹೊರತುಪಡಿಸಿ ಭಕ್ತರಿಗೆ ದರ್ಶನಕ್ಕೆ ರಾತ್ರಿ 8ರವರೆಗೂ ಅವಕಾಶ ಕಲ್ಪಿಸಲಾಗಿದೆ. ವಿಜಯದಶಮಿ ಹಬ್ಬವಾದ ಮರುದಿನ ದೇವಿಯ ಕೆಂಡಾರ್ಚನೆ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.