ಬರಗೇರಮ್ಮ ದೇವಿಗೆ ಬಳೆ ಅಲಂಕಾರ ನಾಳೆ

Baragerammadevi
Published on

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿ ಇರುವ ನಗರದೇವತೆ ಬರಗೇರಮ್ಮ ದೇವಿಗೆ ಗೌರಿ-ಗಣೇಶ ಹಬ್ಬದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಲಕ್ಷಾಂತರ ಬಳೆಗಳಿಂದ ವಿಶೇಷವಾಗಿ ಸೆ. 18ರಂದು ಅಲಂಕಾರ ಸೇವೆ ಜರುಗಲಿದೆ.

ಕಳೆದ 15 ದಿನಗಳಿಂದಲೂ ಸಾವಿರಾರು ಭಕ್ತರು ತಮ್ಮ ಶಕ್ತ್ಯಾನುಸಾರ ಬಳೆಗಳನ್ನು ದೇಗುಲಕ್ಕೆ ತಲುಪಿಸಿದ್ದು, ಶನಿವಾರ ರಾತ್ರಿಯಿಂದಲೇ ದೇಗುಲದ ಹತ್ತಾರು ಅರ್ಚಕರು ಅಲಂಕಾರದ ಸಿದ್ಧತೆಯಲ್ಲಿ ನಿರತರಾಗಲಿದ್ದಾರೆ.

ಭಾದ್ರಪದ ಮಾಸದ ಅಂಗವಾಗಿ ಶುಕ್ರವಾರ ದೇವಿಗೆ ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಸುಗಂಧರಾಜ, ಕಾಕಡಾ, ಪತ್ರೆ ಸೇರಿ ವಿವಿಧ ಬಗೆಯ ಹೂವುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಪುಷ್ಪಾಲಂಕಾರ ಸೇವೆ ನೆರವೇರಿತು.

ಬೆಳಗ್ಗೆ 11.30ರಿಂದ ರಾತ್ರಿ 10.30ರವರೆಗೂ ಸಾವಿರಾರು ಭಕ್ತರು ತಾಯಿಯ ದರ್ಶನ ಪಡೆದು ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು. ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net