ಬರಗೇರಮ್ಮ ದೇವಿ ಕಾರ್ತಿಕೋತ್ಸವ ಡಿ. 6ಕ್ಕೆ

Barageramma Devi
Published on

ಚಿತ್ರದುರ್ಗ: ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ಡಿ. 6ರಂದು ಸಂಜೆ 6ಕ್ಕೆ ಕಡೇ ಕಾರ್ತಿಕ ಮಹೋತ್ಸವ ಜರುಗಲಿದೆ.

ಕಾರ್ತಿಕೋತ್ಸವದ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಸೇವೆ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ದೇಗುಲ ಆವರಣದಲ್ಲಿ ಸಾವಿರಾರು ದೀಪ ಹಚ್ಚಲು ಅವಕಾಶ ಕಲ್ಪಿಸಲಾಗಿದೆ.

ಭಕ್ತರೇ ಮನೆಗಳಿಂದ ದೀಪ ತರಬೇಕು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net