ಬರಗೇರಮ್ಮ ಕಾರ್ತಿಕ ಮಹೋತ್ಸವ ಇಂದು

Barageramma Devi
Published on

ಚಿತ್ರದುರ್ಗ: ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ಡಿ. 8ರಂದು ಕಡೇ ಕಾರ್ತಿಕ ಮಹೋತ್ಸವ ಸಂಜೆ 6.30ಕ್ಕೆ ಜರುಗಲಿದೆ. ಇದರ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಸೇವೆ, ಮಹಾಮಂಗಳಾರತಿ, ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ದೇಗುಲ ಆವರಣದಲ್ಲಿ ಸಾವಿರಾರು ದೀಪ ಹಚ್ಚಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಭಕ್ತರೇ ಮನೆಗಳಿಂದ ದೀಪ ತರಬೇಕು ಎಂದು ದೇಗುಲದ ಅರ್ಚಕ ಪೂಜಾರ್ ಕಸ್ತೂರಪ್ಪ ಮನವಿ ಮಾಡಿದ್ದಾರೆ.

ದೇವಿಯ ಈ ಪೂಜಾ ಮಹೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅರ್ಚಕರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net