ಬರಗಾಲದ ಸಂಕಷ್ಟದಲ್ಲಿದ್ದ ರೈತರಿಗೆ ಬೆಳೆ ವಿಮೆ ಪರಿಹಾರದ ನೆರವು

Pradhan Mantri Fasal Bima 23 DEC 19
Published on

ಚಿತ್ರದುರ್ಗ: ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ರಾಜ್ಯದ ರೈತರಿಗೆ,2023-24ನೇ ಸಾಲಿನ ಪ್ರಧಾನ ಮಂತ್ರಿ ಬೆಳೆ ವಿಮೆ ಪರಿಹಾರ ಪಾವತಿಯಾಗುತ್ತಿ ರುವುದು ಯುಗಾದಿ ಹಬ್ಬದ ಈ ಸಂದರ್ಭದಲ್ಲಿ ಕೊಂಚ ನೆಮ್ಮದಿ ತರುವಂತಾಗಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ,ಶೇಂಗಾ ಮತ್ತಿತರ ಆಯಾ ಭಾಗದ ವಿವಿಧ ಪ್ರಮುಖ ಬೆಳೆಗಳಿಗೆ ವಿಮಾ ಕಂತು ಪಾ ವತಿಸಿದ್ದ ರೈತರ ಖಾತೆಗೆ ಕಳೆದ ಮೂರ‌್ನಾಲ್ಕು ದಿನಗಳಿಂದ ಪರಿಹಾರ ಜಮಾ ಆಗುತ್ತಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಇದರಿಂದಾಗಿ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಬವಣೆ ನೀಗಿಸುವ ನಿಟ್ಟಿನಲ್ಲಿ ಒಂದಿಷ್ಟರ ಮಟ್ಟಿಗೆ ನೆರವು ದೊರಕಿದಂ ತಾಗಿದೆ. ರಾಜ್ಯದಲ್ಲಿ 19,31,147 ರೈತರು 4442855 ಎಕರೆ ವಿಸ್ತೀರ್ಣದ ವಿವಿಧ ಬೆಳೆಗಳಿಗೆ 336,92,09249 ರೂ.ವಿಮಾ ಕಂತು ಪಾವತಿಸಿದ್ದು, ಈಗ ಪರಿಹಾರ ಜಮಾ ಆಗುತ್ತಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ 15450 ರೈತರು 42644 ಎಕರೆಗೆ ಸಂಬಂಧಿಸಿದಂತೆ 76876286 ರೂ.ಬೆಳೆ ವಿಮೆ ಪ್ರೀಮಿಯಂ ಪಾವತಿಸಿದ್ದಾರೆ. ಬಳ್ಳಾರಿ 3023-13391-12555507. ಬೆಳಗಾವಿ-40005-97573-118668702. ಬೆಂಗಳೂರು ಗ್ರಾಮಾಂತರ 19472-23676-11810670.
ಬೆಂಗಳೂರು ನಗರ 1023-1314-832758. ಬೀದರ್ 245273-397281-138916732. ಚಾಮರಾಜನಗರ 12232-24166-7904167.ಚಿಕ್ಕಬಳ್ಳಾಪುರ-38450-61136-39595428. ಚಿಕ್ಕಮಗಳೂರು 28146-59273-106317964.ಚಿತ್ರದುರ್ಗ 87700-269645-145153381.
ದಕ್ಷಿಣಕನ್ನಡ 94022-247418-305511489.ದಾವಣಗೆರೆ 42890-101669-79292869. ಧಾರವಾಡ-116971-282435-207416208. ಗದಗ 99705-324043-229483632. ಹಾಸನ 66150-100651-73869363. ಹಾವೇರಿ 272155-542477-342642501.ಕಲಬುರಗಿ 153690-462921-186831750.
ಕೊಡಗು 1556-5277-4699764. ಕೋಲಾರ 10137-18225-15431670. ಕೊಪ್ಪಳ 70070-187291-105880179. ಮಂಡ್ಯ 44799-60125-17339824. ಮೈಸೂರು 2798-4033-1861884. ರಾಯಚೂರು 47912-154484-98383282. ರಾಮನಗರ-12720-23049-27178713. ಶಿವಮೊಗ್ಗ 85024-142151-260964335.
ತುಮಕೂರು-88108-159280-113801125. ಉಡುಪಿ 4993-13093-17366517. ಉತ್ತರಕನ್ನಡ 80994-101645-148457416. ವಿಜಯನಗರ 27748-101800-44499759. ವಿಜಯಪುರ 109209-390306-410331474 ಹಾಗೂ ಯಾ ದಗಿರಿ ಜಿಲ್ಲೆಯ 8722 ರೈತರು 30368 ಎಕರೆಗೆ 19333886 ರೂ.ವಿಮಾ ಕಂತು ಪಾವತಿಸಿದ್ದರು.

ಕೋಟ್
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ವಿವಿಧ ಬೆಳೆಗಳಿಗೆ ವಿಮಾ ಕಂತು ಪಾವತಿಸಿದ್ದ ರೈತರಿಗೆ 284 ಕೋಟಿ ರೂ.ಪರಿಹಾರ ಬಿಡುಗಡೆಯಾಗಿದೆ. ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಜಮಾ ಆಗುತ್ತಿದೆ.
ಬಿ.ಮಂಜುನಾಥ್,ಜಂಟಿ ನಿರ್ದೇಶಕ,ಕೃಷಿ ಇಲಾಖೆ,ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net