ಬರಗಾಲ ಎದುರಿಸಬೇಕಾಗುತ್ತದೆ

CTD 5 VIJAGANA KENDRA--0009
Published on

ಚಿತ್ರದುರ್ಗ: ವಿಜ್ಞಾನ-ತಂತ್ರಜ್ಞಾನ, ಕೈಗಾರಿಕಾ ಯುಗ ಆರಂಭವಾದಾಗಿನಿಂದಲೂ ಪರಿಸರ ನಾಶವಾಗುತ್ತಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ವಿಷಾದಿಸಿದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದಿಂದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಎಲ್ಲಿ ಅರಣ್ಯ, ಗಿಡ-ಮರ, ಫಲವತ್ತಾದ ಮಣ್ಣು ಇರುತ್ತದೋ ಅಲ್ಲಿ ಉತ್ತಮ ಆರೋಗ್ಯವಿರುತ್ತದೆ. ಎಲ್ಲಿ ಗಿಡ ಮರಗಳನ್ನು ನಾಶ ಮಾಡಲಾಗುತ್ತದೋ ಅಲ್ಲಿ ಬರಗಾಲ ಎದುರಿಸಬೇಕಾಗುತ್ತದೆ ಎಂದರು.
ವಕೀಲ ಕೆ.ಎಸ್.ವಿಜಯ ಮಾತನಾಡಿದರು. ಉಪ ಪ್ರಾಚಾರ್ಯ ಎಂ.ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್.ದಾಸೇಗೌಡ, ಕೆ.ರಾಜಶೇಖರ್, ನವೀನ್ ಪಿ.ಆಚಾರ್, ಎಂ.ಆರ್.ನಾಗರಾಜ್, ವೆಂಕಟಶಿವರೆಡ್ಡಿ, ಆರ್‌ಟಿಎಸ್ ಶ್ರೀನಿವಾಸ್ ಇದ್ದರು. ಅನನ್ಯಾ ಪ್ರಾರ್ಥಿಸಿದರು. ವೀಣಾ ಸ್ವಾಗತಿಸಿದರು. ಶ್ವೇತಾಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net