ಬಯಲು ಶೌಚಮುಕ್ತ ಗ್ರಾಮಕ್ಕೆ ಸಹಕರಿಸಿ

10 BK 11
ಬಸವಕಲ್ಯಾಣ ತಾಲೂಕಿನ ಹಾರಕೂಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಾಪಂ ಇಒ ರಮೇಶ ಸುಲ್ಪಿ, ಪಿಡಿಒ ಜ್ಯೋತಿ ಕಾವಡೆ, ಮೇಘರಾಜ ನಾಗರಾಳೆ, ಚನ್ನಪ್ಪ ಹೊಳ್ಳರ, ಸಿದ್ರಾಮ ಹೆಗ್ಡೆ, ಅಪ್ಪರಾವ ಡಾವರೆ ಇತರರಿದ್ದರು.
Published on

ಬಸವಕಲ್ಯಾಣ: ಗ್ರಾಮಸ್ಥರು ವೈಯಕ್ತಿಕ ಮತ್ತು ಸಮುದಾಯ ಶೌಚಗೃಹ ಬಳಸಿ ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

ಹಾರಕೂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಗೃಹ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸಾಕಷ್ಟು ಹಣ ಖರ್ಚು ಮಾಡಿ ಶೌಚಗೃಹ ನಿರ್ಮಿಸಿ ಕೊಟ್ಟಿದೆ. ಆದರೆ ಗ್ರಾಮಸ್ಥರು ಅವುಗಳನ್ನು ಬಳಕೆ ಮಾಡದೆ ಶೌಚಕ್ಕೆ ಹೊರಗಡೆ ಹೋಗುವುದು ಇಂದಿಗೂ ನಿಂತಿಲ್ಲ. ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವಗೊಂಡಿವೆ. ಆದ್ದರಿಂದ ಗ್ರಾಮಸ್ಥರು ಕಡ್ಡಾಯ ಶೌಚಗೃಹ ಬಳಕೆ ಮಾಡಬೇಕು ಮತ್ತು ಅಕ್ಕ-ಪಕ್ಕದ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ನಂತರ ನರೇಗಾ ಯೋಜನೆಯಡಿ ನಿರ್ಮಿಸಿದ ಶೌಚಗೃಹ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಶೋಭಾವತಿ ವೈಜಿನಾಥ, ಉಪಾಧ್ಯಕ್ಷೆ ಸಾವಿತ್ರಿ ರಾಜಕುಮಾರ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ, ಸದಸ್ಯರಾದ ಚನ್ನಪ್ಪ ಹೊಳ್ಳರ, ಸಿದ್ರಾಮ ಹೆಗ್ಡೆ, ಅಪ್ಪರಾವ ಡಾವರೆ, ಮಂಗಲಾ ಬಿರಾದಾರ, ಮಾರುತಿ ಸಿರಗಾಪುರ, ಕವಿತಾ ಸುನೀಲ, ಪುಂಡಲೀಕ ಪೋತೆ, ಕಲ್ಪನಾ ಪ್ರಭಾಕರ, ಮಲ್ಲಮ್ಮ, ಪಿಡಿಒ ಜ್ಯೋತಿ ಕಾವಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net