

ಹುಮನಾಬಾದ್: ತಾಲೂಕಿನ ಎಲ್ಲ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ ಮಾಡಲು ಎಲ್ಲರೂ ಸಂಕಲ್ಪ ತೊಟ್ಟು ಕೆಲಸ ನಿರ್ವಹಿಸಬೇಕು ಎಂದು ತಾಪಂ ಇಒ ದೀಪಿಕಾ ನಾಯ್ಕರ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯಿAದ ಡಿಪಿಓ, ಮೇಲ್ವಿಚಾರಕರು, ಆಶಾ, ಅಂಗನವಾಡಿ ಕಾರ್ಯಕರ್ತರು, ಜಿಪಿಎಲ್‌ಎಫ್ ಸದಸ್ಯರಿಗೆ ಋತು ಚಕ್ರ ನಿರ್ವಹಣೆ ಹಾಗೂ ಸ್ವಚ್ಛ ಬೀದರ್ ಅಭಿಯಾನದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಬಯಲು ಬಹಿರ್ದೆಸೆ ಮುಕ್ತ ಅಭಿಯಾನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ತಮ್ಮ ಗ್ರಾಮದಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜಾಗೃತಿ ಮೂಡಿಸಬೇಕು ಎಂದರು.
ಕೇಂದ್ರ ರಾಜ್ಯ ಅಭಿವೃದ್ಧಿ, ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ನಾರಿ ಶಕ್ತಿ ಜಾಗೃತಿ ಮಾಡಿದರೆ, ಇಡೀ ಸಮುದಾಯಕ್ಕೆ ಜಾಗೃತಿ ಮಾಡಿದಂತೆ. ತರಬೇತಿ ಮೂಲಕ ಬಹಿರ್ದೆಸೆ ಮುಕ್ತ ಗ್ರಾಮ ಮಾಡಲು ಸಂಕಲ್ಪಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ ಮಾತನಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸ್ವಚ್ಛ ಬೀದರ್ ಜಿಲ್ಲೆಗೆ ಶ್ರಮಿಸುತ್ತಿರುವುದು ಮಾದರಿ ಸೇವೆ ಎಂದರು.
ಜಿಪಂ ಲೆಕ್ಕ ಸಹಾಯಕ ಪ್ರವೀಣ ಸ್ವಾಮಿ, ರಾಷ್ಟೀಯ ಆರೋಗ್ಯ ಮಿಷನ್ ಜಿಲ್ಲಾ ಸಂಯೋಜಕ ಶಿವಶಂಕರ ಬೇಮಳಗಿ, ಡಾ.ಯೋಗೇಶ್ವರಿ, ಆಶಾ ಮೆಲ್ವೀಚಾರಕಿ ಲಕ್ಷಿ, ಕಲಾವತಿ ರೆಡ್ಡಿ, ತಾಪಂ ಸಹಾಯಕ ನಿರ್ದೇಶಕಿ ಶಿವಲೀಲಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಪ್ರಕಾಶ ಹಿರೇಮಠ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಸುಕೇಶನಿ, ತಾಲೂಕು ಕ್ಷೇತ್ರ ವ್ಯವಸ್ಥಾಪಕ ವಿಕಾಸ ಇತರರಿದ್ದರು.