ಬಯಲಿನಲ್ಲಿ ತೆರೆದ ಅರಿವಿನ ಗ್ರಂಥಾಲಯ

2711Klb16
Published on

ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಪಕ್ಕದ ಖಾಲಿ ಸ್ಥಳದಲ್ಲಿ ತೆರೆದ ಅರಿವು ಗ್ರಂಥಾಲಯ ಆರಂಭಿಸುವ ಮೂಲಕ ಪಾಲಿಕೆ ಸದಸ್ಯ ಸಚಿನ ಶಿರವಾಳ ವಿಭಿನ್ನ ಪ್ರಯತ್ನ ಮಾಡಿದ್ದಾರೆ.

ಈ ಸ್ಥಳದಲ್ಲಿ ನಿತ್ಯವೂ ನೂರಾರು ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುತ್ತ ನಿಲ್ಲುತ್ತಾರೆ. ಹಿಂದೆ ಇಲ್ಲಿ ಬಸ್ ನಿಲ್ದಾಣವಿದ್ದು ಅದನ್ನು ಕೆಲ ವರ್ಷದ ಹಿಂದೆ ತೆರವು ಮಾಡಲಾಗಿತ್ತು. ಕೂಡಲು ಅವಕಾಶವಿಲ್ಲದಂತಾಗಿತ್ತು. ಇದನ್ನು ನೋಡಿ ಮರುಗಿದ್ದ ಪಾಲಿಕೆ ಸದಸ್ಯ ಸಚಿನ ಶಿರವಾಳ ಆರಂಭದಲ್ಲಿ ಬಸ್ ನಿಲ್ದಾಣ, ಕೂಡುವ ವ್ಯವಸ್ಥೆ ಮಾಡುವ ಚಿಂತನೆಯಲ್ಲಿದ್ದರು. ಈ ವೇಳೆಯಲ್ಲಿಯೇ ಜನೋಪಯೋಗಿ ಅರಿವು ಓಪನ್ ಏರ್ ಲೈಬ್ರರಿ ಚಿಂತನೆ ಮೂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದಂದು ಲೋಕಾರ್ಪಣೆ ಮಾಡಿದ್ದಾರೆ.

ಸ್ವಂತ ಖರ್ಚಿನಲ್ಲಿ ೧೦ ಬೆಂಚ್‌ಗಳನ್ನು ಅಳವಡಿಸಿದ್ದು, ಗುಣಮಟ್ಟದ ರ‍್ಯಾಕ್ ಮತ್ತು ಶೆಡ್ ನಿರ್ಮಿಸಿ ೧೪೦ಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಇಟ್ಟಿದ್ದಾರೆ. ಪ್ರತಿ ಬೆಂಚ್‌ನ ಪಕ್ಕದಲ್ಲಿ ಕುಂಡಗಳನ್ನು ಇಟ್ಟಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ, ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಎಸ್‌ಡಿಎ, ಎಫ್‌ಡಿಎ, ಪಿಡಿಒ, ಕೆಎಎಸ್, ಪಿಎಸ್‌ಐ ಪರೀಕ್ಷೆ, ಮೆಂಟಲ್ ಎಬಿಲಿಟಿ, ಸಂವಿಧಾನ, ಕಾನೂನು ಸಂಬAಧಿ ಪುಸ್ತಕಗಳನ್ನು ಇಡಲಾಗಿದೆ.

ಪಾರಕಾರ್ಮಿಕರೊಬ್ಬರೂ ಆ ಸ್ಥಳವನ್ನು ನಿತ್ಯ ಬೆಳಗ್ಗೆ ಸ್ವಚ್ಛಗೊಳಿಸಿ, ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಡುತ್ತಾರೆ. ಸಸಿಗಳಿಗೆ ನೀರು ಹಾಕುತ್ತಾರೆ. ರಾತ್ರಿಯೂ ತೆರೆದೆ ಇರುತ್ತದೆ. ಯಾರು ಬೇಕಾದರೂ ದಾನ ಮಾಡಬಹುದು. ಎನಿ ಬಡಿ ಕ್ಯಾನ್ ಡೊನೆಟ್ ಎಬಿಸಿಡಿ ನಿಯಮವಿದ್ದು, ಸಾಮಾಜಿಕ ಜವಾಬ್ದಾರಿಯೊಂದಿಗೆ ನಿರ್ವಹಣೆ ಮಾಡುವ ಗುರಿ ಹೊಂದಿದ್ದಾರೆ. ಪಕ್ಕದಲ್ಲಿಯೇ ಇರುವ ಡಾ.ಎಸ್.ಎಂ.ಪAಡಿತ್ ರಂಗಮAದಿರದ ಸಿಸಿ ಕ್ಯಾಮೆರಾಕ್ಕೆ ಪೂರಕವಾಗುವಂತೆ ಸಿಸಿ ಅಳವಡಿಸುವ ಯೋಜನೆ ಸಚಿವ ಶಿರವಾಳ ಹೊಂದಿದ್ದಾರೆ.

ನಿಲುಗಡೆಯ ಸಮಯ ವ್ಯರ್ಥವಾಗದಂತೆ ಅರಿವಿನ ಬಯಲು ಗ್ರಂಥಾಲಯ ಆರಂಭಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಮಾರ್ಗದರ್ಶನದಂತೆ ಜ್ಞಾನ ಪ್ರಸಾರಕ್ಕೆ ಪುಟ್ಟ ಪ್ರಯತ್ನ ಮಾಡಲಾಗಿದೆ. ಸಾರ್ವಜನಿಕ ಜವಾಬ್ದಾರಿ ಇದ್ದು, ವಿದ್ಯಾರ್ಥಿಗಳು ಸಮಯದ ಸದುಪಯೋಗ ಪಡೆಸಿಕೊಂಡು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು.

| ಸಚಿವ ಶಿರವಾಳ, ಅಧ್ಯಕ್ಷ 

ಪಾಲಿಕೆ ಸಾರ್ವಜನಿಕ ಅರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net