

ಕಲಬುರಗಿ: ಬಯಲಿಗೆ ಹೋಗುತ್ತಿದ್ದ ಮಹಿಳೆಯ ಕೊರಳಲ್ಲಿ ಇದ್ದ ತಾಳಿ ಸರವನ್ನು ದೋಚಿಕೊಂಡು ಹೋದ ಟನೆ ತಾಡತೆಗನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭಾರತಿ ಕರಿಕಳೆರ ಅವರ ಸರಕಳ್ಳತನ ಮಾಡಲಾಗಿದೆ. ಜೂ.೮ರಂದು ರಾತ್ರಿ ೮.೧೫ರ ಸುಮಾರಿಗೆ ಬಯಲಿಗೆ ಹೋಗಿ ಮನೆಗೆ ಬರುತ್ತಿರುವಾಗ ಕಡಣಿ ಗ್ರಾಮದ ರಸ್ತೆಯಿಂದ ಬೈಕ್ನಲ್ಲಿ ಬಂದ ಅಪರಿಚತರು ಕೊರಳಲ್ಲಿದ್ದ ಒಂದು ತೊಲೆಯ ತಾಳಿ ಸರ, ಜಿಯೋ ಕೀ ಪ್ಯಾಡ್ ಮೊಬೈಲ್ ದೋಚಿಕೊಂಡು ಹೋಗಿದ್ದಾರೆ ಎಂದು ರಹತಾಬಾದ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.