

ರಾಮಕೃಷ್ಣ ನಾಯ್ಕ ಬಿ.ವಿ ಪಾವಗಡ
ಬಯಲಲ್ಲೇ ಶೌಚ, ಸೀರೆ ಮರೆಯಲ್ಲಿ ಸ್ನಾನ, ಚರಂಡಿ, ರಸ್ತೆ, ಬೀದಿ ದೀಪವಿಲ್ಲದೆ ಪಡಿಪಾಟಲು, ಕುಡಿಯುವ ನೀರು, ವಸತಿ, ಅಂಗನವಾಡಿ ಕೇಂದ್ರ ಇಲ್ಲದೇ ಪರದಾಟ... ಇದು, ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿ ಕಥೆ&ವ್ಯಥೆ.
ತಾಲೂಕಿನ ನಿಡಗಲ್ ಹೋಬಳಿ ಕೊಂಡೆತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗದಾಳಬೆಟ್ಟ ಗ್ರಾಮದ ಗೊಲ್ಲರಹಟ್ಟಿಯಲ್ಲಿ 40ಕ್ಕೂ ಹೆಚ್ಚು ಮನೆಗಳಿದ್ದು, ಸೌಲಭ್ಯ ವಂಚಿತವಾಗಿವೆ. ಇಲ್ಲಿ ತಲೆತಲಾಂತರದಿಂದ ವಾಸಿಸುತ್ತಿದ್ದರೂ ಮನೆಗಳಿಗೆ ಖಾತೆ ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ರ್ನಿಲಕ್ಷ್ಯ ವಹಿಸಿದ್ದರಿಂದ ಸರ್ಕಾರದ ಸೌಲಭ್ಯ ಗಗನಕುಸುಮವಾಗಿದೆ.
ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮನೆಗೊಂದು ಶೌಚಗೃಹ ನಿರ್ಮಿಸಿಕೊಳ್ಳಲು ಜಾಗೃತಿ ಮೂಡಿಸಿ, ಶೌಚಗೃಹ ನಿಮಾರ್ಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಕೊಂಡೆತಿಮ್ಮನಹಳ್ಳಿ ಗ್ರಾಪಂ ಅಧಿಕಾರಿಗಳ ರ್ನಿಲಕ್ಷ$್ಯದಿಂದ ಮುಗದಾಳಬೆಟ್ಟ ಗೊಲ್ಲರಹಟ್ಟಿಯ ಮೂಲಸೌಕರ್ಯ ದೂರದ ಮಾತಾಗಿದೆ.
ಅಧಿಕಾರಿಗಳ ರ್ನಿಲಕ್ಷ್ಯ:
ಗ್ರಾಪಂನಿಂದ ಶೌಚಗೃಹ ನಿರ್ಮಿಸಿಕೊಡಲು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳ ರ್ನಿಲಕ್ಷ್ಯದಿಂದ ಜನರ ಬೇಡಿಕೆ ಈಡೇರುತ್ತಿಲ್ಲ. ಗ್ರಾಮದಲ್ಲಿ ಹೆಣ್ಣುಮಕ್ಕಳು ಶೌಚ ಹಾಗೂ ಸ್ನಾನದ ಗೃಹವಿಲ್ಲದ ಕಾರಣ ಬಯಲಲ್ಲೇ ಶೌಚ ಮತ್ತು ಚಪ್ಪಡಿ ಕಲ್ಲುಗಳಿಗೆ ಸೀರೆ ಸುತ್ತಿಕೊಂಡು ಮತ್ತು ಮರದ ಬಳ್ಳಿಗಳ ತಡಿಕೆಯ ಮರೆಯಲ್ಲಿ ಸ್ನಾನ ಮಾಡುವ ದಯನೀಯ ಸ್ಥಿತಿ ಇದೆ.
ಪುಂಡರಿಂದ ಬಹಿರ್ದೆಸೆ ಚಿತ್ರೀಕರಣ!
ಸಂಜೆ ವೇಳೆ ಹೆಣ್ಣುಮಕ್ಕಳು, ಮಹಿಳೆಯರು ಪಕ್ಕದ ಬೀಳು ಹೊಲಗಳಲ್ಲಿ ಬಹಿರ್ದೆಸೆಗೆ ಹೋದರೆ ಪುಂಡರು ಮೊಬೈಲ್ನಲ್ಲಿ ೋಟೋ, ವಿಡಿಯೋ ಮಾಡಿ ಆತಂಕ ಸೃಷ್ಟಿಸುತ್ತಿದ್ದಾರೆ. ತಕ್ಷಣ ಪರಿಹಾರ ದೊರಕಿಸಿಕೊಡುವಂತೆ ಗ್ರಾಮದ ಮಹಿಳೆಯರು ಆಗ್ರಹಿಸುವ ಜತೆಗೆ ನೋವು ತೋಡಿಕೊಂಡಿದ್ದಾರೆ.
ಹಟ್ಟಿಯಲ್ಲಿ ಒಂದೇ ನೀರಿನ ಟ್ಯಾಂಕ್ ಇದ್ದು, 2 ದಿನಕ್ಕೊಮ್ಮೆ ದಿನ ಬಳಕೆಗೆ ಮತ್ತು ಕುಡಿಯುವುದಕ್ಕೆ ನೀರು ಬಿಡುತ್ತಾರೆ. ಜಲ ಜೀವನ ಮಿಷನ್ ಯೋಜನೆಯಡಿ ದೇಶಕ್ಕೆಲ್ಲ ನಲ್ಲಿಗಳನ್ನು ಹಾಕಿ ನೀರು ಬಿಡಲಾಗುತ್ತಿದೆ. ಆದರೆ ಈ ಗೊಲ್ಲರ ಹಟ್ಟಿಗೆ ಜೆಜೆಎಂ ಕಾಮಗಾರಿಯೇ ಮಾಡಿಲ್ಲ. ಇದರಿಂದ ಹಟ್ಟಿಯ ಜನರು ಶುದ್ಧ ಕುಡಿಯುವ ನೀರಿಗಾಗಿ ಕಾಯುವ ಪರಿಸ್ಥಿತಿ ಬಂದೊದಗಿದೆ.
ಗುಡಿಸಲಲ್ಲೇ ವಾಸ:
ಮುಗದಾಳ ಬೆಟ್ಟ ಗ್ರಾಮದ ಗೊಲ್ಲರಹಟ್ಟಿಯಲ್ಲಿ 2012ರಲ್ಲಿ ಕೃಷ್ಣ ಕುಠೀರ ವಸತಿ ಯೋಜನೆಯಡಿ 10ಕ್ಕೂ ಹೆಚ್ಚು ಮನೆಗಳು ಮಂಜೂರಾಗಿದ್ದು, ಗ್ರಾಪಂನಿಂದ ನಿವೇಶನ ಮತ್ತು ಮನೆಗಳಿಗೆ ಖಾತೆ ಮಾಡಿಕೊಡದ ಕಾರಣ ವಸತಿ ಯೋಜನೆಯಿಂದ ವಂಚಿತವಾಗಿ ಇಂದಿಗೂ ಕಾಡು ಪ್ರಾಣಿಗಳು ದಾಳಿ ನಡೆಸುವ ಭಯದಲ್ಲೇ ಗುಡಿಸಿಲಿನಲ್ಲೇ ವಾಸಮಾಡುವಂತಾಗಿದೆ.