

ಕೊರಟಗೆರೆ: ತಾಲೂಕಿನ ಬೂಚನಹಳ್ಳಿಯಲ್ಲಿ ನ.26ರಂದು ನಡೆಯುವ ಸಮಾವೇಶದ ರೂಪುರೇಷೆಯನ್ನು ಗುರುವಾರ ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ತಹಸೀಲ್ದಾರ್ ಮಂಜುನಾಥ್ ಪರಿಶೀಲಿಸಿದರು.
ಬೈರಗೊಂಡಲು ಬಫರ್ ಡ್ಯಾಂ ನಿಮಾರ್ಣಕ್ಕೆ ರೈತರೊಂದಿಗೆ ಬಹಿರಂಗ ಸಭೆಗೆಆಗಮಿಸುತ್ತಿರುವಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಆಗಮನದ ನಿರೀಕ್ಷೆ ಹಿನ್ನೆಲೆಯಲ್ಲಿ ಹೇಲಿಪ್ಯಾಡ್ ಸ್ಥಳ ಪರಿಶೀಲನೆ ವೇಳೆ -ಜಿಲ್ಲಾಧಿಕಾರಿಗಳ ಬಳಿ ಬಫರ್ ಡ್ಯಾಂ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಸ್ಥಳಿಯ ರೈತರು, ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಭೂಮಿ ಪೂಜೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದ 5 ಸಾವಿರ ಎಕರೆಯಲ್ಲಿ ನಿಮಾರ್ಣವಾಗಲಿರುವ ಬಫರ್ ಡ್ಯಾಂನಿಂದ ಕೋಳಾಲ ಹೋಬಳಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಡ್ಯಾಂ ನಿಮಾರ್ಣ ಮಾಡುವುದೇ ಆದರೆ, ನಮ್ಮ ಜೀವಬೇಕಾದರೂ ಕೊಟ್ಟೆವು ಭೂಮಿ ನೀಡುವುದಿಲ್ಲ ಎಂದು ಅಧಿಕಾರಿಗಳ ಕಾಲಿಗೆ ರೈತರು ಬಿದ್ದ ಘಟನೆಯೂ ನಡೆಯಿತು. ಕಾರ್ಯಕ್ರಮದ ಗುಟ್ಟುಬಿಟ್ಟು ಕೊಡದ ಅಧಿಕಾರಿಗಳ ತಂಡ ನ.26ರಂದು ನಡೆಯುತ್ತಿರುವುದು ಕೊರಟಗೆರೆ ಬಫರ್ ಡ್ಯಾಂ ನಿಮಾರ್ಣವೋ ಅಥವಾ ರೈತರೊಂದಿಗೆ ಬಹಿರಂಗ ಸಭೆಯೋ ಎನ್ನುವುದು ಇನ್ನೂ ಗುಟ್ಟಾಗಿಯೇ ಇದ್ದು, ಅಧಿಕಾರಿಗಳ ನಡೆ ನಿಗೂಢವಾಗಿದೆ.