ಬಫರ್ ಜೋನ್ ಸಮೇತ ರಾಜಕಾಲುವೆ ಅಳತೆ ಮಾಡಿ

Published on

ವಿರಾಜಪೇಟೆ: ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಾಜಕಾಲುವೆಗಳ ಬಫರ್ ಜೋನ್ ಸಮೇತ ಅಳತೆ ಮಾಡುವಂತೆ ತಹಸೀಲ್ದಾರ್ ಆದೇಶ ನೀಡಿದ್ದಾರೆ.

ಸೇವ್ ರಿವರ್ ಕಾವೇರಿ ಸಂಸ್ಥೆಯು ರಾಷ್ಟ್ರೀಯ ಹಸಿರು ನ್ಯಾಯ ಪೀಠ ಮತ್ತು ಸರಕಾರದ ಆದೇಶದಂತೆ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ರಾಜಕಾಲುವೆಗಳ ಬಫರ್ ಜೋನ್ ಅಳತೆ ಮಾಡಲು ನಿರ್ದೇಶನ ನೀಡುವಂತೆ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿತ್ತು.

ವಿರಾಜಪೇಟೆ ಭೂ ದಾಖಲೆಗಳ ಇಲಾಖೆ ಇವರು ರಾಜಕಾಲುವೆಗಳ ಒತ್ತುವರಿಯನ್ನು ಮಾತ್ರ ಗುರುತು ಮಾಡಿ ಸರಕಾರಕ್ಕೆ ನಕ್ಷೆಯೊಂದಿಗೆ ವರದಿ ಸಲ್ಲಿಸಿತು. ಇದೀಗ ತಹಸೀಲ್ದಾರ್ ಅವರು ಬಫರ್ ಜೋನ್ ಸಮೇತ ಅಳತೆ ಮಾಡಿ ವರದಿ ಸಲ್ಲಿಸಲು ಎಡಿಎಲ್‌ಆರ್ ವಿರಾಜಪೇಟೆಯವರಿಗೆ ಆದೇಶ ನೀಡಿದ್ದಾರೆ. ವಿರಾಜಪೇಟೆ ಬಫರ್ ಜೋನ್ ವ್ಯಾಪ್ತಿಯಲ್ಲಿ ವಾಣಿಜ್ಯ ಮತ್ತು ಇತರ ಕಟ್ಟಡಗಳ ನಿರ್ಮಾಣ ಮಾಡುತ್ತಿರುವ ಬಗ್ಗೆ ಹಾಗೂ ವಿರಾಜಪೇಟೆ ನಗರ ವ್ಯಾಪ್ತಿಗೆ ಸಂಬಂಧಪಟ್ಟ ವಿಜಯನಗರ, ಅಂಬಟ್ಟಿ, ಆರ್ಜಿ, ಬೇಟೋಳಿ ಗ್ರಾಮದಲ್ಲಿ ಇರುವ ರಾಜಕಾಲುವೆ ಜಾಗವನ್ನು ಸಂಬಂಧಿಸಿದಂತೆ ಜಂಟಿ ಅಳತೆ ಕಾರ್ಯ ನಡೆಸುವ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net