ಬಪ್ಪರಗಾ ಘಟನೆಗೆ ಸಿಡಿದೆದ್ದ ಮಾದಿಗರು

ydg04
Published on

ಯಾದಗಿರಿ: ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ಇತ್ತೀಚೆಗೆ ಮಾದಿಗ ಸಮಾಜದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಿಡಿಗೇಡಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಮಾದಿಗ ದಂಡೋರಾ ಹೋರಾಟ ಸಮಿತಿ ಅಧ್ಯಕ್ಷ ನರಸಪ್ಪ ದಂಡೋರಾ ಆಗ್ರಹಿಸಿದರು.

ಸುಭಾಷ್ ಚೌಕ್‌ನಲ್ಲಿ ಸಮಿತಿ ಜಿಲ್ಲಾ ಘಟಕ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಿಸಿ ತಿಂಗಳಾದರೂ ಕಿಡಿಗೇಡಿಯನ್ನು ಬಂಧಿಸಿಲ್ಲ. ನೆಪಮಾತ್ರಕ್ಕೆ ಡಿಸಿ, ಎಸ್‌ಪಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆ, ದಬ್ಬಾಳಿಕೆ, ಅತ್ಯಾಚಾರ ಮತ್ತು ಕೊಲೆ ಜಾಸ್ತಿಯಾಗಿವೆ. ಬಪ್ಪರಗಾ ಘಟನೆಯಂತೂ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಆದರೂ ಇದರ ಗಂಭೀರತೆ ಅರಿಯದ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮುಖಂಡ ಕೆ.ಬಿ. ವಾಸು ಮಾತನಾಡಿ, ಸಮಾಜಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ. ಎಂಥz್ದೆÃ ಪರಿಸ್ಥಿತಿ ಎದುರಾದರೂ ಹೋರಾಟಕ್ಕೆ ಸಿದ್ಧ ಎಂದರು. ನಾಗಮ್ಮ ಕಟ್ಟಿಮನಿ ಮಾತನಾಡಿ, ಮಾದಿಗ ಸಮಾಜದ ಮಗಳ ಮೇಲೆ ಅತ್ಯಾಚಾರ ಮಾಡಿದವನನ್ನು ಬಂಧಿಸಿ ಜೈಲಿಗೆ ಕಳಿಸಿ ಎಂದು ಆಗ್ರಹಿಸಿದರು. ತೆಲಂಗಾಣದ ಲತಾ ಮಾದಿಗ ಮಾತನಾಡಿ, ಇದು ಕೇವಲ ಮಾದಿಗ ಸಮಾಜಕ್ಕೆ ಆದ ಅನ್ಯಾಯವಲ್ಲ. ಇಡೀ ಜೀವಪರ ಸಮುದಾಯಕ್ಕೆ ಆದ ಅನ್ಯಾಯ ಎಂದು ಗುಡುಗಿದರು.

\ರಾಜು ಹದನೂರ, ನಂದಕುಮಾರ ಬಾಂಬೇಕರ್ ಮಾತನಾಡಿದರು. ಪ್ರತಿಭಟನಾ ಪಾದಯಾತ್ರೆ ಹಿರೇಅಗಸಿಯಿಂದ ಕನಕ, ಡಾ.ಅಂಬೇಡ್ಕರ್, ಶಾಸ್ತಿç ಚೌಕ್ ಮೂಲಕ ಸುಭಾಷ ವೃತ್ತಕ್ಕೆ ಆಗಮಿಸಿತು. ಯಾದಗಿರಿ, ಕಲಬುರಗಿ ಜಿಲ್ಲೆಯ ಸಾವಿರಾರು ಜನರು ಭಾಗವಹಿಸಿದ್ದರು. ಸ್ಥಳಕ್ಕೆ ಅಪರ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಆಗಮಿಸಿ ಮನವಿಪತ್ರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net