ಬನ್ನೇರುಘಟ್ಟದ ಪುರಾಣ ಪ್ರಸಿದ್ಧ ಚಂಪಕಧಾಮಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ

jatre
?????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಆನೇಕಲ್: ತಾಲೂಕಿನ ಬನ್ನೇರುಘಟ್ಟದ ಪುರಾಣ ಪ್ರಸಿದ್ಧ ಶ್ರೀ ಚಂಪಕಧಾಮಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು. ಈ ನಿಮಿತ್ತ ವಾರದಿಂದ ವಿಶೇಷ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಬುಧವಾರ ಚಂಪಕಧಾಮಸ್ವಾಮಿ, ಶ್ರೀದೇವಿ ಮತ್ತು ಭೂದೇವಿಯನ್ನು ಬೃಹತ್ ಕಲ್ಲಿನ ಗಾಲಿಗಳ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಶಾಸಕ ಎಂ. ಕೃಷ್ಣಪ್ಪ, ಬನ್ನೇರುಘಟ್ಟ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಸಂಪಂಗಿ, ಉಪಾಧ್ಯಕ್ಷೆ ರಾಜೇಶ್ವರಿಚೇತನ್ ಹಾಗೂ ಮುಖಂಡ ಆರ್ .ಕೆ ರಮೇಶ್, ಮಹದೇವ್ , ವಿನೋದ್ ಇತರರು ಪುಷ್ಪಾರ್ಚನೆ ಮಾಡುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.

ಎರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

ಬೇಗಳಮ್ಮ ಮೆರವಣಿಗೆ: ಬನ್ನೇರುಘಟ್ಟ ಜಾತ್ರೆಯಲ್ಲಿ ಮಲ್ಲಿಗೆ ಹೂವಿನ ಕರಗ ಮಾದರಿಯಲ್ಲಿ ನಡೆಸುವ ಬೇಗಳಮ್ಮ ದೇವಿ ಆಚರಣೆ ವಿಶೇಷ. ಈ ಭಾರಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೇಗಳಮ್ಮ ದೇವಿಯ ಹರಕೆ ಆಚರಣೆಯಲ್ಲಿ ಭಾಗಿಯಾದರು.

ತೃತೀಯ ಲಿಂಗಿಗಳ ಜಾತ್ರೆ: ಜಾತ್ರೆಯಲ್ಲಿ ತೃತೀಯ ಲಿಂಗಿಗಳು ಹರಕೆ ತೀರಿಸಿ ಪೂಜಾ ಕಾರ‌್ಯಗಳಲ್ಲಿ ತೊಡಗುವುದು ಜಾತ್ರೆಯ ಮತ್ತೊಂದು ವಿಶೇಷ. ಈ ಬಾರಿ ತಂಡೋಪ ತಂಡವಾಗಿ ಆಗಮಿಸಿದ ತೃತೀಯ ಲಿಂಗಿಗಳು ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net