

ಬೇಲೂರು : ವಿಜಯ ದಶಮಿ ಅಂಗವಾಗಿ ಶ್ರೀಚನ್ನಕೇಶವ ಸ್ವಾಮಿ ದೇವರನ್ನು ಆಶ್ವಾರೋಹಣದ ಮೂಲಕ ಬುಧವಾರ ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ಬನ್ನಿ ಮಂಟಪಕ್ಕೆ ಮೆರವಣಿಗೆಯಲ್ಲಿ ಕರೆದೊಯ್ದು ದೇವರೊಂದಿಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬನ್ನಿ ಪತ್ರವನ್ನು ನೆರೆದಿದ್ದ ಭಕ್ತರಿಗೆ ವಿತರಿಸಲಾಯಿತು.
ಬೇಲೂರಿನ ದೇಗುಲದಿಂದ ಅಶ್ವರೂಡರಾಗಿ ಚನ್ನಕೆಶವಸ್ವಾಮಿ ದೇವರನ್ನು ಮದ್ಯಾಹ್ನದ ನಂತರ ಅರ್ಚಕರು ಮತ್ತು ಅಡ್ಡೆಗಾರರು ದೇಗುಲದಿಂದ ಹೊರಟು ಬಂಟೇನಹಳ್ಳಿಯ ಬನ್ನಿ ಮಂಟಪಕ್ಕೆ ಕರೆ ತಂದು ಕುಳ್ಳಿರಿಸಲಾಯಿತು. ನಂತರ ದೇಗುಲದ ಸಾಂಪ್ರದಾಯದಂತೆ ಭಕ್ತರ ಸಮ್ಮುಖದಲ್ಲಿ ಆಯುದಗಳು, ಬೀಗದ ಕೀಗಳು ಹಾಗೂ ಇತರೆ ಪರಿಕರಗಳನ್ನಿಟ್ಟು ಅರ್ಚಕರು ಪೂಜೆ ಸಲ್ಲಿಸಿದ ನಂತರ ಅರ್ಚಕರು ಬನ್ನಿ ಮರದ ಸೊಪ್ಪನ್ನು ಕಡಿದು, ದೇವರಿಗೆ ಸಮರ್ಪಿಸಿದರು. ಹಾಗೂ ಸೇರಿದ್ದ ಭಕ್ತರಿಗೆ ವಿತರಿಸಿ ವಿಜಯ ದಶಮಿ ಆಚರಿಸಲಾಯಿತು.
ತಹಸೀಲ್ದಾರ್ ರಮೇಶ್, ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ,ಆರಾಯಣಸ್ವಾಮಿ, ಇಒ ವಿದ್ಯುಲ್ಲತಾ, ಅರ್ಚಕ ಶ್ರೀನಿವಾಸ್ ಭಟ್ಟರ್, ನರಸಿಂಹ ಪ್ರಿಯ ಭಟ್ಟರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಅಪಾರ ಭಕ್ತರಿದ್ದರು.