ಬನಶಂಕರಿ ದೇವಿಗೆ ಹೂವುಗಳ ಅಲಂಕಾರ

Banashakari Devi
Published on

ಬಾದಾಮಿ: ಗುರು ಪೂರ್ಣಿಮೆ, ಕಡ್ಲಿಗಡಬ ಹುಣ್ಣಿಮೆ ನಿಮಿತ್ತ ಉತ್ತರ ಕರ್ನಾಟಕದ ಆರಾಧ್ಯ ದೇವತೆ, ಸುಕ್ಷೇತ್ರ ಬನಶಂಕರಿ ದೇವಿಗೆ ವಿವಿಧ ಹೂಗಳಿಂದ ಕಣ್ಣು ಕೋರೈಸುವಂತೆ ಬುಧವಾರ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಂಗಳೂರಿನ ಭಕ್ತ ನಾಗರಾಜ ಅವರು ದೇವಿಗೆ ಈ ವಿಶೇಷ ಹೂಗಳ ಸೇವೆ ಸಲ್ಲಿಸಿದರು. ಪ್ರತಿ ವರ್ಷ ಹೀಗೆ ದೇವಿಗೆ ಹೂವಿನ ಅಲಂಕಾರ ಮಾಡಿಸುತ್ತ ಬಂದಿದ್ದಾರೆ. ಬೆಂಗಳೂರಿನಿಂದಲೇ ಹೂವು ಹಾಗೂ ಅಲಂಕಾರ ಮಾಡುವ ಸಿಬ್ಬಂದಿ ಸಮೇತ ಬಂದು ಸೇವೆ ಸಲ್ಲಿಸುವುದು ವಿಶೇಷವಾಗಿದೆ. ಬುಧವಾರ ದೇವಿ ಮಂದಿರ ಹೂವುಗಳಲ್ಲೇ ಝಗಮಗಿಸಿತು.

ನಗರ ಹಾಗೂ ತಾಲೂಕು, ಜಿಲ್ಲೆಯ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಭಕ್ತ ಸಾಗರ ಹರಿದು ಬಂದಿತ್ತು. ಭಕ್ತರಿಗೆ ಉಚಿತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net