ಬನವಾಸೆ ರಂಗಸ್ವಾಮಿ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ

ಬನವಾಸೆ ರಂಗಸ್ವಾಮಿ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ
Published on

ಹಾಸನ : ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 3 ಹಾಗೂ 4 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಬಿ.ಕೆ ರಂಗಸ್ವಾಮಿ (ಬನವಾಸೆ) ಅವರು ಮುಖಂಡರುಗಳೊಂದಿಗೆ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿದರು. ಅವರು ಹೋದ ಕಡೆಯಲೆಲ್ಲ ಮಹಿಳೆಯರು ಆರತಿ ಬೆಳಗಿ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ.

ಪ್ರಚಾರ ವೇಳೆ ಮಾತನಾಡಿದ ಬನವಾಸೆ ರಂಗಸ್ವಾಮಿ ಅವರು, ನಿಮ್ಮ ಮನೆಯ ಮಗನೆಂದು ನನ್ನನ್ನು ಪರಿಗಣಿಸಿ, ಈ ಮನೆಯ ಮಗನನ್ನು ಗೆಲ್ಲಿಸಿ. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಕಷ್ಟಗಳ ಜತೆಗೆ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ಮತದ ರೂಪದಲ್ಲಿ ನೀಡಿದ ಋಣವನ್ನು ಖಂಡಿತ ಮರೆಯದೆ ಅದಕ್ಕೆ ಪ್ರತಿಯಾಗಿ ನಿಮ್ಮಗಳ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನಾನು ಎಂದಿಗೂ ಆಡಿದ ಮಾತನ್ನು ತಪ್ಪುವವನಲ್ಲ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ಗೊತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯರಾದ ರವಿ, ವೆಂಕಟೇಶ್, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ವಿನೋದ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರು, ಯುವ ಮುಖಂಡರಾದ ಹರ್ಷ, ವಿವಿಧ ಘಟಕದ ಅಧ್ಯಕ್ಷರುಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net