ಬನದ ತಾಯಿ ಬನಶಂಕರಿಗೆ ಸೀರೆ ಅಲಂಕಾರ..!

986ec406-d1ed-49ae-9b61-744330d99f90
ತಾಯಿ ಬನಶಂಕರಿಗೆ ಸೀರೆ ಅಲಂಕಾರ
Published on

ಬಾಗಲಕೋಟೆ: ನೂಲು ಹುಣ್ಣಿಮೆ ಅಂಗವಾಗಿ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿಗೆ ಶುಕ್ರವಾರ ಮಾಡಿದ್ದ ಸೀರೆ ಅಲಂಕಾರ ಗಮನ ಸೆಳೆಯಿತು ನಾನಾ ಬಣ್ಣದ ಸೀರೆಗಳಲ್ಲಿ ಬಶಂಕರಿ ತಾಯಿ ಅಲಂಕರಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ರಾಮದುರ್ಗದ ದೇವಾಂಗ ಸಮಾಜದವರಿಂದ ಸೀರೆ ಅಲಂಕಾರ ನೆರವೇರಿಸಲಾಗಿದೆ. ತಾವೇ ನೇಯ್ಗೆ ಮಾಡಿದ ಸೀರೆಗಳಿಂದ ಶೃಂಗರಿಸಿ ಭಕ್ತರು ಹರಿಕೆ ತೀರಿಸಿದರು.ಅಂದಾಜು 600 ಸೀರೆಗಳನ್ನು ಇದಕ್ಕಾಗಿ ಬಳಸಲಾಗಿದೆ. ನೇಕಾರ ಸಮುದಾಯದ ಆರಾಧ್ಯದೇವಿ ತಾಯಿ ಬನಶಂಕರಿ. ಹುಣ್ಣಿಮೆ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು ಪುನೀತರಾದರು. ಸೀರೆ ವೈಭವ ಕಣ್ಮನೆ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net