ಬದುಕು ರೂಪಿಸುವ ಶಿಕ್ಷಕರ ಕಾರ್ಯ ಶ್ಲಾಘನೀಯ

ಅಫಜಲಪುರದಲ್ಲಿ ಭಾನುವಾರ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಶಿP್ಷÀಣ ಸಂಸ್ಥೆಯ ೧೯೯೩-೯೪ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಹಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಜರುಗಿತು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶಾಸಕ ಎಂ.ವೈ.ಪಾಟೀಲ್, ಸದಾಶಿವ ಮೇತ್ರಿ, ಮಂಜೂರ್ ಪಟೇಲ್ ಇತರರಿದ್ದರು.
ಅಫಜಲಪುರದಲ್ಲಿ ಭಾನುವಾರ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಶಿP್ಷÀಣ ಸಂಸ್ಥೆಯ ೧೯೯೩-೯೪ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಹಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಜರುಗಿತು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಶಾಸಕ ಎಂ.ವೈ.ಪಾಟೀಲ್, ಸದಾಶಿವ ಮೇತ್ರಿ, ಮಂಜೂರ್ ಪಟೇಲ್ ಇತರರಿದ್ದರು.
Published on

ಅಫಜಲಪುರ: ಶಿP್ಷÀಣ ಮತ್ತು ನೈತಿಕ ಬೋಧನೆ ಮೂಲಕ ಬದುಕನ್ನು ರೂಪಿಸುವ ಶಿP್ಷÀಕರ ಕಾರ್ಯ ಶ್ಲಾಘನೀಯ. ಪ್ರತಿಯೊಬ್ಬರೂ ಗುರುಗಳನ್ನು ಸ್ಮರಿಸುವುದರ ಜತೆಗೆ ಅವರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.

ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಶ್ರೀ ಮಹಾಂತೇಶ್ವರ ವಿದ್ಯಾವರ್ಧಕ ಶಿP್ಷÀಣ ಸಂಸ್ಥೆಯ ೧೯೯೩-೯೪ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಹಮಿಲನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಸರ್ಕಾರ, ಸರ್ಕಾರೇತರ ಕ್ಷೇತ್ರದಲ್ಲಿ ಉನ್ನತ ಹುz್ದೆಗಳಲ್ಲಿz್ದÁರೆ. ಸುಮಾರು ೩ ದಶಕ ನಂತರ ಎಲ್ಲರೂ ಕೂಡಿಕೊಂಡು ಕಲಿಸಿದ ಗುರುಗಳಿಗೆ ಸ್ಮರಿಸುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಹೇಳಿದರು.

ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ೩೩ ವರ್ಷಗಳ ಬಳಿಕ ಎಸ್ಸೆಸ್ಸೆಲ್ಸಿ ಬಳಗ ಒಂದೇ ವೇದಿಕೆಯಲ್ಲಿ ಸೇರಿರುವುದು ಸಂಭ್ರಮದ P್ಷÀಣವಾಗಿದೆ. ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯಾರ್ಥಿಗಳು ಜನ್ಮಕೊಟ್ಟ ತಂದೆ, ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸಬೇಕು ಎಂದು ಕರೆ ನೀಡಿದರು.

ಪ್ರಮುಖರಾದ ಮಂಜೂರ್ ಅಹ್ಮದ್‌ಪಟೇಲ್, ಸದಾಶಿವ ಮೇತ್ರಿ, ಸಿದ್ರಾಮಪ್ಪ ಮನ್ಮಿ, ಮಲ್ಲಿಕಾರ್ಜುನ ಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ, ರಾಜೇಶ ನಾಕೇದಾರ, ಮಳೇಂದ್ರ ಡಾಂಗೆ, ಬಿ.ಎಸ್.ಪಟೇಲ್, ಶ್ರೀಪಾದರಾವ ಕುಲಕರ್ಣಿ, ಎನ್.ಪಿ.ಉಮಾ, ಅಶೋಕ ಕಟ್ಟಿಮನಿ, ಅನೀಲ ಘನಾತೆ, ಮೀನಾಕ್ಷಿ ಅಂಬೂರೆ, ಕನ್ಯಾಕುಮಾರಿ ಮನ್ಮಿ, ಸುಭಾಷ ಜಮಗೊಂಡ, ಎಸ್.ಜಿ.ಪಾಟೀಲï, ಎಸ್.ಎನ್.ಗಣಿ, ಬಿ.ಎಸ್.ಬಿರಾದಾರ, ಜಿ.ಆರ್.ಕುಲಕರ್ಣಿ, ಎಸ್.ಆರ್. ಸಣ್ಣೂರ, ಡಿ.ಎಂ.ನದಾಫ್, ಜಿ.ಎಸ್.ಕ¯್ಲÉÆÃಳ್ಳಿ, ಈರಣ್ಣ ಗುಣಾರಿ, ಸಿ.ವೈ.ಪಾಟೀಲ್, ಶಿವಶಂಕರ ಚೌಧರಿ, ದೊಡ್ಡಪ್ಪಗೌಡ ಕೆಂಭಾವಿ, ಶಿವಶಂಕರ ವಾಂಗೆ, ಅಹೀಲಾಬಾಯಿ ಹೊಸಮನಿ, ಪಾರ್ವತಿ ತೇಲಿ, ದತ್ತು ದೊಡ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net