ಬದುಕು ದುರಸ್ತಗೊಳಿಸುವ ವ್ಯಸನದಿಂದ ಅಂತರವಿರಲಿ

29 ckm 1
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಶ್ರೀ ಶಕ್ತಿ ಅಸೋಸಿಯೇಷನ್, ಶ್ರೀ ಶಕ್ತಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವ ಸತಿ ಕೇಂದ್ರ ಹಾಗೂ ಪ್ರಜಾಪಿತ ಬ್ರಹ್ಮಕುಮಾರೀಸ್ ಸಹಯೋಗದಲ್ಲಿ ನಡೆದ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾ ನಡೆಯಿತು.
Published on

ಚಿಕ್ಕಮಗಳೂರು: ಬದುಕನ್ನು ದುರಸ್ತಗೊಳಿಸುವ ನಶಯುಕ್ತ ಪದಾರ್ಥಗಳಿಂದ ಯುವಜನತೆ ಅಂತರ ಕಾಯ್ದುಕೊಳ್ಳಬೇಕು. ಭವಿಷ್ಯದಲ್ಲಿ ನಿಗಧಿತ ಗುರಿಯನ್ನು ತಲುಪಲು ಆರೋಗ್ಯದಿಂದ ಜೀವಿಸುವುದು ಅತ್ಯಗತ್ಯ ಎಂದು ಶ್ರೀ ಶಕ್ತಿ ಅಸೋಸಿಯೇಷನ್ ಯೋಜನಾ ನಿರ್ದೇಶಕ ಡಾ. ಅನೀತ್‌ಕುಮಾರ್ ತಿಳಿಸಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಶ್ರೀ ಶಕ್ತಿ ಅಸೋಸಿಯೇಷನ್, ಶ್ರೀ ಶಕ್ತಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವ ಸತಿ ಕೇಂದ್ರ ಹಾಗೂ ಪ್ರಜಾಪಿತ ಬ್ರಹ್ಮಕುಮಾರೀಸ್ ಸಹಯೋಗದಲ್ಲಿ ನಡೆದ ಮಾದಕ ವ್ಯಸನದ ಬಗ್ಗೆ ಅರಿವು ಮೂಡಿಸುವ ಬೈಕ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರ ಸರ್ಕಾರ ನಶಮುಕ್ತ ಭಾರತ ಅಭಿಯಾನದ ಯೋಜನೆಯು ಐದು ವರ್ಷವನ್ನು ಪೂರೈಸಿದ್ದು, ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯ ಶಾಲಾ-ಕಾಲೇಜು, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳ ಹಾಗೂ ರಂಗೋಲಿ, ಚಿತ್ರಕಲೆ ಸ್ಪರ್ಧೆ, ಜಾಥಾವನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮಾದಕ ವಸ್ತು, ನಶೆ ಪದಾರ್ಥಗಳು ಮನುಷ್ಯನನ್ನು ಅತ್ಯಾಚಾರ, ಕಳ್ಳಸಾಗಾಣೆ ಹಾಗೂ ಕಾನೂನು ಬಾಹಿರ ಪ್ರಕರಣಗಳಲ್ಲಿ ಸಿಲುಕುವಂತೆ ಮಾಡುತ್ತದೆ. ಇದನ್ನು ಬೇರುಸಮೇತ ಕಿತ್ತೆಸೆಯಲು ವಿದ್ಯಾರ್ಥಿಗಳು, ಸಂಘ-ಸAಸ್ಥೆಗಳ ಸಹಭಾಗಿತ್ವದಲ್ಲಿ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಕುಡಿತ, ಧೂಮಪಾನ, ತಂಬಾಕು ಸೇವನೆಯಿಂದ ಮನುಷ್ಯ ಹಣ ಕಳೆದುಕೊಳ್ಳುವ ಜೊತೆಗೆ ಆರೋಗ್ಯಪೂರ್ಣ ಶರೀರವನ್ನು ಕಳೆದುಕೊಳ್ಳುವ ಸಂಭವವಿದೆ. ಆ ನಿಟ್ಟಿನಲ್ಲಿ ವ್ಯಸನಿಗಳ ಸಹವಾಸ ಬಿಟ್ಟು, ಸಜ್ಜನರ ಸ್ನೇಹತ್ವ ಬಯಸಬೇಕು. ಅಲ್ಲದೇ ಸಮಾಜವನ್ನು ದುಶ್ಚಟಗಳಿಂದ ದೂರವಾಗಿಸಲು ಸ್ವಯಂಪ್ರೇರಿತರಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ವಿಕಲಚೇತನ ವಿವಿದೋz್ದೆÃಶ ಕಾರ್ಯಕರ್ತ ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ತಡೆಗಟ್ಟುವ ಕುರಿತು ವಿಕಲಚೇತನರಿಂದ ಬೈಕ್‌ಜಾಥಾವನ್ನು ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರದಿAದ ಆಜಾದ್‌ಪಾರ್ಕ್ದವರೆಗೆ ಆಯೋಜಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಶಕ್ತಿ ಅಸೋಸಿಯೇಷನ್ ವ್ಯವಸ್ಥಾಪಕ ಮಂಜುನಾಥ್, ಪ್ರಜಾಪಿತ ಬ್ರಹ್ಮಕುಮಾರೀಸ್ ಸಂಸ್ಥೆ ಸದಸ್ಯೆ ಮಹಾಲಕ್ಷ್ಮೀ ಹಾಗೂ ಹತ್ತಾರು ವಿಕಲಚೇತನರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net