ರಾಯಚೂರು
ನಾವು ಓದುವ, ಬರೆಯುವ ಅಕ್ಷರ ಬದುಕು ಕಟ್ಟಿಕೊಡದಿದ್ದರೆ ಅಕ್ಷರದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಭಾಷೆ ಜನರಿಗೆ ಬದುಕು ಕಟ್ಟಿಕೊಡುವಂತಹ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸ್ವಾತಂತ್ರೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ತಿಕ ಚಟುವಟಿಕೆಗಳು ಜನರನ್ನು ಸೆಳೆಯುವಂತಿರಬೇಕು. ಅದಕ್ಕೆ ಜನರ ಹಾಗೂ ಯುವಕರ ಸಹಭಾಗಿತ್ವ ಪಡೆಯಬೇಕು ಎಂದರು.
ಮಾತೃಭಾಷೆಯಾದ ಕನ್ನಡದ ಬಗ್ಗೆ ಬಹಳಷ್ಟು ಜನರಲ್ಲಿ ಕೀಳರಿಮೆಯಿದೆ. ಆ ಮನೋಭಾವದಿಂದ ನಾವು ಹೊರಬರಬೇಕಾಗಿದೆ. ಪ್ರಮುಖವಾಗಿ ಮಕ್ಕಳ ಪೋಷಕರು ಇಂಗ್ಲಿಷ್ ಬಗ್ಗೆ ಇರುವ ವ್ಯಾಮೋಹವನ್ನು ತೊರೆಯಬೇಕಾಗಿದೆ. ತಮಿಳು ಭಾಷಿಕರಲ್ಲಿರುವಂತೆ ನಾವು ಕನ್ನಡದ ಬಗ್ಗೆ ಅಭಿಮಾನ ಹೊಂದಬೇಕಾಗಿದೆ.
ಪ್ರಾಚೀನ ಕಾಲದಿಂದಲೂ ಕನ್ನಡ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ತಮಿಳು ಪ್ರಾಚೀನ ಭಾಷೆ ಎಂದು ಹೇಳಲಾಗುತ್ತಿದೆ. ಆದರೆ ಕನ್ನಡ ಅದಕ್ಕಿಂತ ಪ್ರಾಚೀನವಾಗಿದ್ದು, ಈ ಬಗ್ಗೆ ಸಂಶೋಧನೆಗಳು ನಡೆಯಬೇಕಾಗಿದೆ. ಗ್ರಾಮೀಣ ಜನರಿಂದ ಕನ್ನಡದ ಬೆಳವಣಿಗೆಗೆ ಕೊಡುಗೆ ಹೆಚ್ಚಾಗಿದೆ.
ಕವಿರಾಜ ಮಾರ್ಗ ಕನ್ನಡದ ಲಕ್ಷಣ ಗ್ರಂಥ ಎಂದು ಹೇಳುತ್ತೇವೆ. ಆದರೆ ಅದಕ್ಕೂ ಮುಂಚೆ ಕನ್ನಡ ಸಾಹಿತ್ಯದ ಕೃಷಿ ನಡೆದಿದ್ದರಿಂದ ಕವಿರಾಜ ಮಾರ್ಗ ರಚನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭಾಷಾ ಅಧ್ಯಯನ ಕಡಿಮೆಯಾಗುತ್ತಿದೆ ಎಂದು ಆರ್.ಶಿವಕುಮಾರ ಖೇದ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಒಳ ಬದುಕಿನ ಮತ್ತು ಹೊರ ಬದುಕಿನ ಎಷ್ಟೋ ಸಂಗತಿಗಳಿಗೆ ಸಾಹಿತ್ಯ ನಿಜವಾದ ಮದ್ದಾಗಿ ಕೆಲಸ ಮಾಡುತ್ತದೆ. ಸಂಕಟ, ಇಕ್ಕಟ್ಟು, ಕೆಡಕಿಗೆ, ಸಂತೋಷ, ವಿನೋದ, ವಿಚಾರಕ್ಕೆ ಸಾಹಿತ್ಯ ಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಕಾವ್ಯ ನಮಗೆ ಪ್ರೀತಿಯನ್ನು ಕೊಡಬೇಕು. ಪ್ರೀತಿಯೇ ಕಾವ್ಯದ ಧರ್ಮವಾಗಬೇಕು. ಈ ನಿಟ್ಟಿನಲ್ಲಿ ಕವಿಗಳು ಸಾಹಿತ್ಯ ರಚನೆಯಲ್ಲಿ ಪ್ರೀತಿ ಹೊರಹೊಮ್ಮುವ ಕಾವ್ಯವನ್ನು ರಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಶೇಖಪ್ಪ ಮತ್ತು ಗೋಪಾಲ ನಾಯಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ರಾಜಶ್ರೀ ಕಲ್ಲೂರಕರ್, ತಾಯರಾಜ ಮರ್ಚೆಟಾಳ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ ಉಪಸ್ಥಿತರಿದ್ದರು.
ರಾಯಚೂರು: ನಾವು ಓದುವ, ಬರೆಯುವ ಅಕ್ಷರ ಬದುಕು ಕಟ್ಟಿಕೊಡದಿದ್ದರೆ ಅಕ್ಷರದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಭಾಷೆ ಜನರಿಗೆ ಬದುಕು ಕಟ್ಟಿಕೊಡುವಂತಹ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಹೇಳಿದರು. ಸ್ಥಳೀಯ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸ್ವಾತಂತ್ರೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ತಿಕ ಚಟುವಟಿಕೆಗಳು ಜನರನ್ನು ಸೆಳೆಯುವಂತಿರಬೇಕು. ಅದಕ್ಕೆ ಜನರ ಹಾಗೂ ಯುವಕರ ಸಹಭಾಗಿತ್ವ ಪಡೆಯಬೇಕು ಎಂದರು. ಮಾತೃಭಾಷೆಯಾದ ಕನ್ನಡದ ಬಗ್ಗೆ ಬಹಳಷ್ಟು ಜನರಲ್ಲಿ ಕೀಳರಿಮೆಯಿದೆ. ಆ ಮನೋಭಾವದಿಂದ ನಾವು ಹೊರಬರಬೇಕಾಗಿದೆ. ಪ್ರಮುಖವಾಗಿ ಮಕ್ಕಳ ಪೋಷಕರು ಇಂಗ್ಲಿಷ್ ಬಗ್ಗೆ ಇರುವ ವ್ಯಾಮೋಹವನ್ನು ತೊರೆಯಬೇಕಾಗಿದೆ. ತಮಿಳು ಭಾಷಿಕರಲ್ಲಿರುವಂತೆ ನಾವು ಕನ್ನಡದ ಬಗ್ಗೆ ಅಭಿಮಾನ ಹೊಂದಬೇಕಾಗಿದೆ. ಕವಿರಾಜ ಮಾರ್ಗ ಕನ್ನಡದ ಲಕ್ಷಣ ಗ್ರಂಥ ಎಂದು ಹೇಳುತ್ತೇವೆ. ಆದರೆ ಅದಕ್ಕೂ ಮುಂಚೆ ಕನ್ನಡ ಸಾಹಿತ್ಯದ ಕೃಷಿ ನಡೆದಿದ್ದರಿಂದ ಕವಿರಾಜ ಮಾರ್ಗ ರಚನೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಭಾಷಾ ಅಧ್ಯಯನ ಕಡಿಮೆಯಾಗುತ್ತಿದೆ ಎಂದು ಆರ್.ಶಿವಕುಮಾರ ಖೇದ ವ್ಯಕ್ತಪಡಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಒಳ ಬದುಕಿನ ಮತ್ತು ಹೊರ ಬದುಕಿನ ಎಷ್ಟೋ ಸಂಗತಿಗಳಿಗೆ ಸಾಹಿತ್ಯ ನಿಜವಾದ ಮದ್ದಾಗಿ ಕೆಲಸ ಮಾಡುತ್ತದೆ. ಸಂಕಟ, ಇಕ್ಕಟ್ಟು, ಕೆಡಕಿಗೆ, ಸಂತೋಷ, ವಿನೋದ, ವಿಚಾರಕ್ಕೆ ಸಾಹಿತ್ಯ ಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಕಾವ್ಯ ನಮಗೆ ಪ್ರೀತಿಯನ್ನು ಕೊಡಬೇಕು. ಪ್ರೀತಿಯೇ ಕಾವ್ಯದ ಧರ್ಮವಾಗಬೇಕು. ಈ ನಿಟ್ಟಿನಲ್ಲಿ ಕವಿಗಳು ಸಾಹಿತ್ಯ ರಚನೆಯಲ್ಲಿ ಪ್ರೀತಿ ಹೊರಹೊಮ್ಮುವ ಕಾವ್ಯವನ್ನು ರಚಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಶೇಖಪ್ಪ ಮತ್ತು ಗೋಪಾಲ ನಾಯಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ರಾಜಶ್ರೀ ಕಲ್ಲೂರಕರ್, ತಾಯರಾಜ ಮರ್ಚೆಟಾಳ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ ಉಪಸ್ಥಿತರಿದ್ದರು.