ಬದುಕು ಉದ್ಧರಿಸುವ ಶಕ್ತಿ ಪುರಾಣ, ಪ್ರವಚನಕ್ಕಿದೆ

18ALD01
Published on

ಅಳವಂಡಿ (ಕೊಪ್ಪಳ): ಜನರಲ್ಲಿ ಮಾನಸಿಕ ನೆಮ್ಮದಿ, ಶಾಂತಿ, ಉತ್ಸಾಹ ಹಾಗೂ ಒಗ್ಗಟ್ಟಿನ ಭಾವನೆ ಮೂಡಬೇಕಾದರೆ ಪುರಾಣ ಪ್ರವಚನ, ಸಾಮೂಹಿಕ ವಿವಾಹ, ಧಾರ್ಮಿಕ ಸಭೆ, ವೇದ, ಉಪನಿಷತ್ತು, ಸಂಗೀತ, ಪ್ರವಚನ, ಆದ್ಯಾತ್ಮ ಮುಂತಾದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಶ್ರೀ ಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.


ಗ್ರಾಮದ ಶ್ರೀಸಿದ್ದೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪೂರ್ತಿ ನಡೆಯುವ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಪ್ರವಚನವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಗುರುವಾರ ಮಾತನಾಡಿದರು.


ಸರ್ವರು ಸಮಾನರು ಎಂಬ ಗುಣವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಭಿವೃದ್ದಿ ಸಾಧ್ಯ. ಹಾಗೂ ಮನಸ್ಸನ್ನು ಪ್ರೀತಿಸುವ ಹಾಗೂ ಗೌರವಿಸುವ ಗುಣ ಬೆಳೆಸಿಕೊಳ್ಳಿ ಹಾಗೂ ಬದುಕನ್ನು ಉಲ್ಲಾಸ ಉತ್ಸಾಹ ಹಾಗೂ ಉದ್ದರಿಸುವ ಶಕ್ತಿ ಪುರಾಣ ಪ್ರವಚನಕ್ಕಿದೆ. ಜೀವನ ಸಾರ್ಥಕವಾಗಲು ಎಲ್ಲರನ್ನೂ ಪ್ರೀತಿಸುವ ಗುಣ ಬೆಳೆಸಿಕೊಳ್ಳಿ, ಸಮನ್ವಯ, ಸಹನೆ, ಭಾವೈಕ್ಯತೆ, ಸರ್ವರು ಸಮಾನರು ಎಂಬ ಗುಣ ಬೆಳೆಸಿಕೊಳ್ಳಿ ಅಂದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದರು.


ಪುರಾಣ ಪ್ರವಚನ ಅಮರೇಗೌಡ ಹೊಗರನಾಳ, ಸಂಗೀತ ಬಿ.ಪಿ.ಮರೇಗೌಡ, ತಬಲಾ ಹರ್ಷವರ್ಧನ ಅವರಿಂದ ಕಾರ್ಯಕ್ರಮ ನಡೆಯಿತು.


ಹಿರೇಹಡಗಲಿಯ ಶ್ರೀಶಿವಯೋಗಿ ಹಾಲಸ್ವಾಮಿಗಳು, ಶ್ರೀವಿಶ್ವೇಶ್ವರ ಪಂಡಿತಾರಾದ್ಯ ಹಾಲಸ್ವಾಮಿಗಳು, ಪ್ರಮುಖರಾದ ವಿನೋದಾದೇವಿ ಇನಾಮದಾರ, ದೇವಪ್ಪ ಕಟ್ಟಿಮನಿ, ಚಿಕ್ಕವೀರಜ್ಜ, ಬೀಮರಡ್ಡಿ ಗದ್ದಿಕೇರಿ, ಅಶೋಕ ಬಂಡಿ, ರಮೇಶ, ಉಮೇಶ, ಬಸಯ್ಯ, ನಾಗಪ್ಪ ಮಾಸ್ತರ, ಅಂದಾನಯ್ಯ, ಸಿದ್ದಣ್ಣ, ಜಗನ್ನಾಥರಡ್ಡಿ, ಗೀರಿಶ ಕಣವಿ, ಈಶಪ್ಪ, ಅರವಿಂದಪ್ಪ, ವಿರುಪಣ್ಣ, ಬಸವರಾಜ, ಮಲ್ಲಪ್ಪ, ಕಲ್ಲಪ್ಪ, ರವಿಕುಮಾರ, ಉಮೇಶ, ಗವಿಸಿದ್ದಪ್ಪ, ಶಿವಾನಂದಯ್ಯ, ಶಂಭುಲಿಂಗಯ್ಯ, ಮಂಜುನಾಥಗೌಡ ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net