ಬದುಕಿರುವಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು

23 ckm 11
ಇತ್ತೀಚಿಗೆ ನಿಧನರಾದ ಚಿಕ್ಕಮಗಳೂರಿನ ಶ್ರೀ ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಸಿ.ಎಸ್.ಏಕಾಂತ್ ರಾಮು ಅವರ ಶ್ರದ್ಧಾಂಜಲಿ ಸಭೆ ನಡೆಸಿ ಮೌನಾಚರಣೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
Published on

ಚಿಕ್ಕಮಗಳೂರು: ಮನುಷ್ಯನ ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ಈ ನಡುವೆ ಬದುಕಿರುವಾಗ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ಕುಬೇರ ತಿಳಿಸಿದರು.

ಇತ್ತೀಚಿಗೆ ನಿಧನರಾದ ಚಿಕ್ಕಮಗಳೂರಿನ ಶ್ರೀ ಗಣಪತಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಸಿ.ಎಸ್.ಏಕಾಂತ್ ರಾಮು ಅವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ೪೦ ವರ್ಷಗಳಿಂದ ಗಣಪತಿ ಸೇವಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಏಕಾಂತ ರಾಮು ನಮ್ಮನ್ನಗಲಿರುವುದು ದುಃಖ ತಂದಿದೆ. ಏಕಾಂತರಾಮು ಹಾಗೂ ಅವರ ಮಗ ಚೇತನ್ ಸೇವಾ ಸಮಿತಿಯ ಗಣಪತಿ ಮೂರ್ತಿಯನ್ನು ಪ್ರತಿ ವರ್ಷ ಉತ್ತಮ ರೀತಿಯಲ್ಲಿ ಮಾಡಿಕೊಡುತ್ತಿದ್ದರು ಎಂದು ಸ್ಮರಿಸಿದರು.

ಗಣಪತಿ ಪ್ರತಿಷ್ಠಾಪನೆಯಿಂದ ಗಣಪತಿ ವಿಸರ್ಜನೆವರೆಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೇವಾ ಸಮಿತಿಯ ಎಲ್ಲ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗಿದ್ದರು. ಅವರ ಅಗಲಿಕೆ ಸೇವಾ ಸಮಿತಿಗೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದರು.

ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ಮಾತನಾಡಿ, ೫೦ ವರ್ಷಗಳಿಂದ ವಿಗ್ರಹಗಳನ್ನು ನಿರ್ಮಿಸಿ ಕೊಡುತ್ತಿದ್ದ ಏಕಾಂತ ರಾಮು ಅವರು ಚಿಕ್ಕಮಗಳೂರು ಅಲ್ಲದೆ ರಾಜ್ಯದ ಹೊರ ಜಿಲ್ಲೆಗಳಲ್ಲಿಯೂ ಕೂಡ ಗಣಪತಿ ಮೂರ್ತಿಗಳನ್ನ ನಿರ್ಮಿಸಿ ಕೊಡುತ್ತಿದ್ದರು. ಬಹಳ ಸುಂದರವಾಗಿ ಮೂರ್ತಿಗಳು ಇವರ ಕೈಚಳಕದಲ್ಲಿ ಮೂಡಿ ಬರುತ್ತಿದ್ದವು. ಸೇವಾ ಸಮಿತಿಯಲ್ಲಿ ಇವರು ಅಧ್ಯಕ್ಷರಾದ ಅವಧಿಯಲ್ಲಿ ನಾನು ಕೂಡ ಅವರೊಂದಿಗೆ ಕೆಲಸ ಮಾಡಿz್ದೆÃನೆ. ಸಾಮಾಜಿಕ ಕಳಕಳಿ ಹೊಂದಿದ ಏಕಾಂತರಾಮು ಮತ್ತೊಮ್ಮೆ ಹುಟ್ಟಿ ಬರಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರನ್ನು ಕಳೆದುಕೊಂಡAತಹ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

ಗಣಪತಿ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೋಟೆ ಈಶ್ವರಪ್ಪ, ಕಾರ್ಯಕಾರಿ ಸಮಿತಿಯ ಮೋಹನ್ ಕುಮಾರ್, ಎಂ.ಎಸ್. ಉಮೇಶ್ ಕುಮಾರ್, ಸತ್ಯನಾರಾಯಣ್, ಬಿ ಎಂ ಕುಮಾರ್, ಸಿ.ಈ.ಚೇತನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net