ಬದುಕಿನಲ್ಲಿ ಅಧ್ಯಾತ್ಮ ಅಳವಡಿಸಿಕೊಳ್ಳಿ

web4
ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುರುಘೇಂದ್ರ ಸ್ವಾಮೀಜಿ, ಬಿ.ಬಿ.ಹುಲಿಗೊಪ್ಪ, ಮಹಾದೇವ ಗೋಪಶೆಟ್ಟಿ, ಈರಣ್ಣ ತುಳಜಣ್ಣವರ, ವಿರಾಜ ಕೊಳಕಿ, ಬಾಳು ಹೊಸಮನಿ ಇತರರಿದ್ದರು.
Published on

ಮುನವಳ್ಳಿ: ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದೆ ಎಂದು ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಶ್ರಾವಣ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಧಾರ್ಮಿಕ ಪಥ ಸಂಚಲನೆ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕನ್ನು ಸಾರ್ಥಕತೆ ಪಡಿಸಿಕೊಳ್ಳಲು ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಕ ಬಿ.ಬಿ.ಹುಲಿಗೊಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿದಿನ ಪಟ್ಟಣದ ವಿವಿಧ ಬೀದಿಗಳಲ್ಲಿ ಶ್ರೀಗಳು ಧಾರ್ಮಿಕ ಪಥಸಂಚಲನ ಮಾಡುವ ಮೂಲಕ ಎಲ್ಲರಲ್ಲಿ ಆಧ್ಯಾತ್ಮಿಕ ಮನೋಭಾವ ಬೆಳೆಯಲು ಪ್ರೇರಣೆಯಾಗಿದ್ದಾರೆ ಎಂದರು.

ಪ್ರಸಾದ ವಿತರಿಸಲಾಯಿತು. ಮಹಾದೇವ ಗೋಪಶೆಟ್ಟಿ, ಈರಣ್ಣ ತುಳಜಣ್ಣವರ, ವಿರಾಜ ಕೊಳಕಿ, ಬಾಳು ಹೊಸಮನಿ, ಅಂದಾನಿ ಗುಂಡ್ಲೂರ, ಗಂಗಾಧರ ಗೊರಾಬಾಳ, ಎಂ.ಎಚ್.ಪಾಟೀಲ, ಐ.ಕೆ.ಮಠಪತಿ, ಈರಣ್ಣ ಸಂಕಣ್ಣವರ, ಮನೋಹರ ನಾಯ್ಕ, ಮಂಜುನಾಥ ಭಂಡಾರಿ, ಶ್ರೀಶೈಲ ಹಿರೇಮಠ, ಅಶೋಕ ಪಟ್ಟಣಶೆಟ್ಟಿ, ಪಂಚಪ್ಪ ಗೋಪಶೆಟ್ಟಿ, ಗೀತಾ ಜಾವೂರ, ಉಷಾ ಗೋಪಶೆಟ್ಟಿ, ಸುಜಾತಾ ಲಂಬೂನವರ, ಅನ್ನಪೂರ್ಣ ಲಂಬೂನವರ, ಮಂಜುಳಾ ಮುತ್ತೂರ, ಶಿವಲೀಲಾ ಬಾಳಿ, ಗುರಮ್ಮ ಗೋಪಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net