

ಸೇಡಂ: ಇAದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಲ್ಲೂ ಬದುಕಿಗೆ ಹಣವೇ ಮುಖ್ಯ ಎಂಬ ಭಾವನೆ ಬರುತ್ತಿದೆ. ಆದರೆ ಶಿಕ್ಷಕ ವೃತಿಯಲ್ಲಿರುವವರಿಗೆ ಹಣ ಮುಖ್ಯವಾಗಬಾರದು, ಬದಲಿಗೆ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಡುವ ಸಂಕಲ್ಪ ಮಾಡಬೇಕು ಎಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಮೀಜಿ ಹೇಳಿದರು.
ಶ್ರೀ ನಾಗೇಂದ್ರ ಬ.ಪಾಟೀಲ್ ಆರೇಮೊಮ್ಮನಹಳ್ಳಿ ಕಲ್ಯಾಣ ಮಂಟಪದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ವಿದ್ಯಾಭಾರತಿ ಕರ್ನಾಟಕದಿಂದ ಶನಿವಾರ ಆಯೋಜಿಸಿದ್ದ ಶೈಕ್ಷಣಿಕ ಸಹ ಮಿಲನ, ವಿದ್ಯಾನೇಹಿಗ ದಿನಚರಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ಜಾಣರು ಎಂಬ ಭಾವನೆ ಹೋಗಬೇಕಿದೆ ಎಂದರು.
ಸAಸ್ಕಾರ, ಸಂಸ್ಕೃತಿ ಮತ್ತು ಮೌಲ್ಯಗಳು ವಿದ್ಯಾರ್ಥಿಯ ನೈಜ ಮಾನದಂಡವಾಗಬೇಕು. ಅಂಕಗಳಿಕೆಯೊAದೆ ತುಲನೆಯಾಗಬಾರದು. ಶಾಲೆಗಳು ಸಮಾಜದ ಪರಿವರ್ತನೆಯ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ರಾಷ್ಟçದ ಸಂಪತ್ತಾಗಿದ್ದು, ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿದಾಗ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಸ್ರೋದ ಮೆಕಾನಿಕಲ್ ಸಿಸ್ಟಮ್ಸ್ನ ನಿವೃತ್ತ ಉಪನಿರ್ದೇಶಕ ಎಚ್.ಎನ್.ಸುರೇಶಕುಮಾರ ಮಾತನಾಡಿ, ವೈಜ್ಞಾನಿಕ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮುಂಚೂಣಿಯತ್ತ ಸಾಗುತ್ತಿದೆ. ಚಂದ್ರಯಾನ-3 ಭಾರತೀಯರ ಹೆಮ್ಮೆಯಾಗಿದೆ ಎಂದು ಹೇಳಿದರು.
ವಿದ್ಯಾಭಾರತಿಯ ಜಿಲ್ಲಾ ಸಂರಕ್ಷಕ ಪಿ.ಭೀಮರೆಡ್ಡಿ, ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಮಾತನಾಡಿದರು.
ಶಿಕ್ಷಣ ಸಮಿತಿಯ ಸಂರಕ್ಷಕ ಬಸವರಾಜ ಪಾಟೀಲ್ ಸೇಡಂ, ವಿದ್ಯಾಭಾರತಿಯ ಹಿರಿಯ ಕಾರ್ಯಕರ್ತ ಜಿ.ಆರ್.ಜಗದೀಶ, ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಉಮೇಶಕುಮಾರ ಬೆಂಗಳೂರು ಇದ್ದರು. ಶಾರದಾ ಸಂಗೀತ ಪಾಠ ಶಾಲೆಯ ಶಿಕ್ಷಕರು ಪ್ರಾರ್ಥಿಸಿದರು. ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ಮಡಿವಾಳ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಹುಳಗೋಳ ನಿರೂಪಣೆ ಮಾಡಿದರು. ಗುಂಡಪ್ಪ ಕರೆಮನೋರ್ ವಂದಿಸಿದರು.