ಬದುಕಿಗೆ ಆತ್ಮ ಸಂತೃಪ್ತಿಯೇ ಶ್ರೇಷ್ಠ

28ARATAL1
Published on

ಅರಟಾಳ: ದೇವರು ಎಲ್ಲವನ್ನೂ ನೀಡಿರುವ ಋಣಭಾರ ನಮ್ಮ ಮೇಲಿದೆ. ಎಲ್ಲರೂ ಒಂದೇ ಎನ್ನುವ ಭಾವ ಬಂದಾಗ ಸದ್ಗುರುವಿನ ಋಣ ತೀರಿಸಲು ಸಾಧ್ಯ ಎಂದು ಹಣಮಾಪುರ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಸಿದ್ದರತ್ನ ಮದಗೊಂಡೇಶ್ವರ ಅಪ್ಪಾಜಿಯವರ ಸದ್ಭಾವನಾ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬದುಕಿಗೆ ಸಂತೋಷ ಮತ್ತು ಆತ್ಮ ಸಂತೃಪ್ತಿಯೇ ಶ್ರೇಷ್ಠ. ಮಾನವಜನ್ಮ ಶ್ರೇಷ್ಠ ಜನ್ಮ ಜೀವನದುದ್ದಕ್ಕೂ ಸಂಸಾರದ ಜತೆಗೆ ಪಾರಮಾರ್ಥದ ಸಾಧನೆ ಮಾಡುತ್ತ ಸಾಗಿದರೆ, ನಿಜವಾದ ಸದ್ಗುರುವಿನ ದರ್ಶನವಾಗುತ್ತದೆ. ಪ್ರತಿಯೊಬ್ಬರೂ ಗುರುವಿನ ಆಶೀರ್ವಾದ ಪಡೆದು ಜೀವನ ಮುಕ್ತಿ ಹೊಂದುವಂತಾಗಬೇಕು ಎಂದರು.

ಬಾಡಗಿ ಬನಸಿದ್ಧ ಮಹಾರಾಜರು ಮಾತನಾಡಿ, ದೇವರ ಮೇಲೆ ವಿಶ್ವಾಸವಿಟ್ಟು ನಡೆಯುವವರು ಅಮರರಾಗುತ್ತಾರೆ. ಜೀವನದಲ್ಲಿ ಬರುವ ಸುಖ ದುಃಖಗಳಿಗೆ ನಮ್ಮ ನಡೆ ಹೊಣೆಯಾಗಿರುತ್ತದೆ. ಗುರುವಿನ ಮಾರ್ಗದಲ್ಲಿ ನಡೆಯುವವರು ಮಹಾತ್ಮರಾಗಬಲ್ಲರು ಅಂತಹ ಶಕ್ತಿ ಗುರುವಿನಲ್ಲಿದೆ ಎಂದರು.

ಜ್ಯೋತಿಲಕ್ಕಪ್ಪ ಮಹಾರಾಜರು, ಮಳಸಿದ್ಧ ಒಡೆಯರ, ಶಿವಸಿದ್ಧ ಲಾಳಿ, ಅಣ್ಣಪ್ಪ ಪಾಟೀಲ, ಈರಪ್ಪ ಮುಧೋಳ, ಭರಮು ಒಡೆಯರ, ಭೀಮಸಿ ಸಂತ, ಸೋಮು ಒಡೆಯರ, ರಾಯಗೊಂಡ ಮೋಪಗಾರ, ರಾಮಪ್ಪ ಭಂಡಾರಿ, ಮಾಳಪ್ಪ ಕಾಂಬಳೆ, ಕರೆಪ್ಪ ಹಿರೇಕುರಬರ, ಪಾಂಡುರAಗ ಪೂಜಾರಿ, ಹನುಮಂತ ಹಟ್ಟಿ, ಶ್ರೀಶೈಲ ಪೂಜಾರಿ, ಮಲ್ಲಿಕಾರ್ಜುನ ತೆಲಸಂಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net