ಬದುಕಿಗಾಗಿ ಮಹಿಳೆಯರ ಹೋರಾಟ

30_03_Mdy_02(Kasapa)
ಮಂಡ್ಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ನಗರ ಕಸಾಪದಿಂದ ಸನ್ಮಾನಿಸಲಾಯಿತು. ರಾಜ್ಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಮೀರಾ ಶಿವಲಿಂಗಯ್ಯ, ಸುಜಾತಾ ಕೃಷ್ಣ, ಸುನಂದಾ ಜಯರಾಂ, ಸಿ.ಕೆ.ರವಿಕುಮಾರ ಚಾಮಲಾಪುರ ಇತರರಿದ್ದರು.
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಪ್ರತಿ ಮಹಿಳೆ ಹುಟ್ಟಿನಿಂದ ಸಾವಿನವರೆಗೂ ಹೋರಾಟದ ಬದುಕು ಸಾಗಿಸುತ್ತಿದ್ದಾಳೆ ಎಂದು ರಾಜ್ಯ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಾಂಡ್ಯವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮಾಡುವ ಮಹಿಳೆಯರದು ಹೋರಾಟದ ಬದುಕೇ ಆಗಿರುತ್ತದೆ. ಗೃಹಿಣಿ, ಪೌರಕಾರ್ಮಿಕ ಮಹಿಳೆ, ರೈತ ಮಹಿಳೆ, ರಾಷ್ಟ್ರಪತಿ ದ್ರೌಪತಿಮುರ್ಮ ಅವರ ಬದುಕು ಹೋರಾಟದಿಂದಲೇ ಕೂಡಿದೆ ಎಂದರು.
ಬಾಲ್ಯವಿವಾಹದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, 21 ವರ್ಷದವರೆಗೂ ಮದುವೆ ನಿಷೇಧವಿದ್ದರೂ 12, 13, 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತಿದೆ. ಇದಕ್ಕಾಗಿ ಓದನ್ನು ನಿಲ್ಲಿಸಲಾಗುತ್ತಿದೆ. ದೌರ್ಜನ್ಯಗಳನ್ನು ಎದುರಿಸಲಾಗದ ಪರಿಸ್ಥಿತಿಗಳು ಬದುಕಿನಲ್ಲಿ ಎದುರಾಗುತ್ತಿವೆ ಎಂದು ಕಳವಳವ್ಯಕ್ತಪಡಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಇಂದು ಅಕ್ಷರ ಲೋಕದಲ್ಲಿನ ಕೆಲ ಮಹಿಳೆಯರು ಟಿವಿ, ಕಂಪ್ಯೂಟರ್, ಮೊಬೈಲ್ಗಳನ್ನು ಬಿಡಲಾಗದಷ್ಟು ಅಪ್ಪಿಕೊಂಡಿದ್ದಾರೆ. ಹಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಕಾಶದವರೆಗೂ ಮಹಿಳೆಯರ ಚಿಂತನೆಗಳು ಸಾಧನೆ ಮಾಡಿವೆ ಎಂದು ನುಡಿದರು.
ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಾ ಕೃಷ್ಣ, ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ತಾಲೂಕು ಅಧ್ಯಕ್ಷ ಚಂದ್ರುಲಿಂಗು, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಮಾಂಡವ್ಯ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಪಾಲುದಾರ ಚೇತನ್‌ಕೃಷ್ಣ, ಬಿ.ಎಂ.ಅಪ್ಪಾಜಪ್ಪ, ಅಂಜನಾ, ಶೋಭಾ, ಉಷಾರಾಣಿ ಇತರರಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಹೇಮಾ ಶಿವಲಿಂಗಯ್ಯ, ಡಾ.ಕೃಪಾ ಚಂದ್ರಶೇಖರ್, ಮಮತಾ ಎಂ.ಶೆಟ್ಟಿ, ಬಿ.ಆರ್.ನೀಲಾ ಶಿವಮೂರ್ತಿ, ಎಚ್.ಎಂ.ಮಮತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net