

ಕಮತಗಿ: ಎಲ್ಲರಂತೆ ನಮ್ಮ ಬದುಕು ಆಗಬಾರದು. ಮಾನವೀಯ, ಕಷ್ಟದಲ್ಲಿರುವರಿಗೆ ಸ್ಪಂದಿಸುವ ಮನೋಗುಣ ಹಾಗೂ ಸಮಾಜವನ್ನು ಸುಧಾರಿಸಿ ಬದುಕುವ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಮತಗಿ-ಕೋಟೆಕಲ್ಲ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 6ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರೋಪಕಾರಿ ಜೀವಿಗಳಾಗಬೇಕು. ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮವಾದ ಶೈಕ್ಷಣಿಕ ವ್ಯವಸ್ಥೆ ಕಟ್ಟಿಕೊಳ್ಳಬೇಕು. ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು. ಶರಣರು, ಸಂತರು ನುಡಿದಂತೆ ನಡೆದಿದ್ದಾರೆ. ಅವರ ಸಾಲಿನಲ್ಲಿ ಒಂದಿಷ್ಟು ಪ್ರಮಾಣದಷ್ಟು ಸಾಗಿ ನಮ್ಮ ಬದುಕು ಸುಂದರವಾಗಿಸಿಕೊಳ್ಳೊಣ ಎಂದರು.
ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಮಾತನಾಡಿ, ನಂಬಿಕೆ, ವಿಶ್ವಾಸದಿಂದ ಬದುಕು ಸಾಗಿಸಬೇಕು. ಜಾತಿ, ಮತ, ಪಂಥಗಳನ್ನು ದೂರವಿಟ್ಟು ಕಲಿಕೆಯಲ್ಲಿ ತೊಡಗಿಕೊಂಡರೆ ಬದುಕಿನಲ್ಲಿ ಉದ್ಧಾರವಾಗಲು ಸಾಧ್ಯವಿದೆ ಎಂದರು.
ಇಲಕಲ್ಲ ವಿಜಯಮಹಾಂತೇಶ ಪದವಿ ಕಾಲೇಜಿನ ಉಪನ್ಯಾಸಕ ಡಾ.ಎಂ.ಬಿ. ಒಂಟಿ ಮಾತನಾಡಿ, ಕೇವಲ ವಿದ್ಯೆ ಕಲಿತರೆ ಸಾಲದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿ ವಿದ್ಯಾಧರ ಮಳ್ಳಿ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಎಂ.ಬಿ. ಶಾಬಾದಿ, ಎಸ್.ಜಿ. ಗುರಿಕಾರ, ಆಡಳಿತಾಧಿಕಾರಿ ಅನಿಲಕುಮಾರ ಕಲ್ಯಾಣಶೆಟ್ಟಿ, ಪ್ರಾಚಾರ್ಯ ಪಿ.ಎಂ. ಗುರುವಿನಮಠ, ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಡಿ.ಆರ್. ಕುಬಸದ, ಉಪನ್ಯಾಸಕ ಎನ್.ಪಿ. ಹುಲಮನಿಗೌಡ್ರ, ಎಂ.ಎಸ್. ಶೆಟ್ಟರ, ವೈ. ಎಚ್. ಕಂಬಳಿ, ಎಂ.ಎಚ್. ಪಾಟೀಲ ಇತರರಿದ್ದರು.