

ವಿಜಯವಾಣಿ ಸುದ್ದಿಜಾಲ ಕಾರವಾರ
ಹವಾಮಾನ ದತ್ತಾಂಶ (ಟರ್ಮ್ ಶೀಟ್) ಆಧಾರದ ಮೇಲೆ ಬೆಳೆ ವಿಮೆಯ ಮೊತ್ತವನ್ನು ಶೇ. 6 ರ ಬಡ್ಡಿಯೊಂದಿಗೆ ಪಾವತಿಸುವಂತೆ ಉತ್ತರ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
2018-19 ನೇ ಸಾಲಿನಲ್ಲಿ ಅಡಕೆ ಬೆಳೆಗೆ ಮಾಡಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆಗೆ ಸಂಬAಽಸಿದAತೆ ತ್ಯಾಗಲಿ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಮೂವರು ಹಾಗೂ ತಾರೀಸರ-ಕಾನಸೂರು ಸಹಕಾರಿ ಸಂಘದ ವ್ಯಾಪ್ತಿಯ ಒಬ್ಬ ರೈತ ಹೂಡಿದ ದಾವೆಯನ್ನು ಪರಿಗಣಿಸಿ ರಿಯಲನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ವಿರುದ್ಧ ಆಯೋಗದ ಅಧ್ಯಕ್ಷ ಕೆ.ವಿ.ಸುರೇಂದ್ರಕುಮಾರ್ ಹಾಗೂ ಸದಸ್ಯ ನಜೀರ್ ಶೇಖ್ ಆದೇಶ ನೀಡಿದ್ದಾರೆ.
ಕಲಗದ್ದೆ ಶೀಲೂರಿನ ರಮಾಕಾಂತ ದತ್ತಾತ್ರೆಯ ಹೆಗಡೆ ಹಾಗೂ ರಾಮಚಂದ್ರ ಗಜಾನನ ಹೆಗಡೆ ಅವರ ತಲಾ 39 ಗುಂಟೆ ಜಮೀನು,
ಹಂಗಾರಖAಡದ ಮಂಜುನಾಥ ಮಹಾಬಲೇಶ್ವರ ಹೆಗಡೆ ಅವರ 13 ಗುಂಟೆ ಜಮೀನಿಗೆ ಪ್ರತಿ ಗುಂಟೆಗೆ 518 ರೂ. ವಿಮಾ ಪರಿಹಾರವನ್ನು ಶೇ.6 ರ ಬಡ್ಡಿಯೊಂದಿಗೆ ನೀಡಬೇಕು ಹಾಗೂ ತಲಾ 2 ಸಾವಿರ ರೂ. ಮಾನಸಿಕ ಹಿಂಸೆಯ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಲಾಗಿದೆ.
ತಾರೀಸರ-ಕಾನಸೂರು ಸೊಸೈಟಿಯಲ್ಲಿ ವಿಮೆ ಮಾಡಿಸಿದ ಉಂಬಳಮನೆ ಹೋಬಳಿ ದೇವಿಸರ ಗ್ರಾಮದ ಲೋಕೇಶ ವಿಶ್ವನಾಥ ಭಟ್ ಅವರ ಸುಮಾರು 1 ಎಕರೆ-28 ಗುಂಟೆ ಜಮೀನಿಗೆ ಪ್ರತಿ ಗುಂಟೆಗೆ ತಲಾ 777 ರೂ.ಗಳನ್ನು ಶೇ. 6 ರ ಬಡ್ಡಿಯೊಂದಿಗೆ ವಿಮಾ ಪರಿಹಾರ ಹಾಗೂ ಮಾನಸಿಕ ಹಿಂಸೆಯ ಪರಿಹಾರವಾಗಿ 5 ಸಾವಿರ ರೂ.ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ.
ಹಿನ್ನೆಲೆ:
ಈ ಎಲ್ಲರೂ 2018-19 ನೇ ಸಾಲಿನಲ್ಲಿ ತಮ್ಮ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ಸಾಲ ಪಡೆದವರಾಗಿದ್ದಾರೆ. ಬೆಳೆ ಸಾಲ ಪಡೆಯಲು ಕಡ್ಡಾಯವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆಯ ಕಂತು (ಪ್ರತಿ ಗುಂಟೆಗೆ 64.64ರೂ.) ಪಾವತಿಸಿದ್ದರು. 2018-19 ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಅಡಕೆ ಬೆಳೆಗೆ ಹಾನಿ ಸಂಭವಿಸಿತ್ತು. ವಿಮಾ ನಿಯಮಾವಳಿಯಂತೆ ಪ್ರತಿ ಗುಂಟೆಗೆ 1295 ರೂ. ವಿಮೆ ಪರಿಹಾರ ಪಾವತಿಸಬೇಕಿತ್ತಾದರೂ ಇನ್ಶರೆನ್ಸ್ ಕಂಪನಿಯು ವಿಮಾ ಪರಿಹಾರ ಮೊತ್ತವನ್ನು ಪಾವತಿಸಿಲ್ಲ ಎಂದು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ಇನ್ಶುರೆನ್ಸ್ ಕಂಪನಿಯ ಜತೆಗೆ ಬೆಳೆ ವಿಮೆ ತುಂಬಿಸಿಕೊAಡ ಕೆಡಿಸಿಸಿ ಬ್ಯಾಂಕ್, ಹಾಗೂ ಅದರ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರನ್ನೂ ಎದುರುದಾರರು ಎಂದು ರೈತರು ದಾವೆ ಹೂಡಿದ್ದರು. ಆದರೆ, ಆಯೋಗವು ಇನ್ಶುರೆನ್ಸ್ ಕಂಪನಿಯನ್ನು ಮಾತ್ರ ಇದಕ್ಕೆ ಹೊಣೆಗಾರರನ್ನಾಗಿ ಮಾಡಿದ್ದು, ಸೊಸೈಟಿ, ಡಿಸಿಸಿ ಬ್ಯಾಂಕ್, ತೋಟಗಾರಿಕೆ ಇಲಾಖೆ ಜವಾಬ್ದಾರರಲ್ಲ ಎಂದು ತಿಳಿಸಿದೆ.
ಮಳೆಯ ದಾಖಲೆಯೇ ತಪು:
ಬಿದ್ದ ಮಳೆಯ ದಾಖಲೆಯ ಆಧಾರದ ಮೇಲೆ ರೈತರಿಗೆ ವಿಮಾ ಪರಿಹಾರ ನೀಡಬೇಕು. ಆದರೆ, ಮಳೆ ಮಾಪನವೇ ತಪು÷್ಪ ಎಂದು ಇನ್ಶುರೆನ್ಸ್ ಕಂಪನಿ ವಾದಿಸಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಡಿಎAಸಿ) ಮತ್ತು ಗ್ರಾಪಂಗಳ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳು ನೀಡಿದ ಮಳೆಯ ದತ್ತಾಂಶವನ್ನು ಪರಿಗಣಿಸಬೇಕು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, 2018 ರ ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ತಾರೆಹಳ್ಳಿ, ಕಾನಸೂರು, ಸೋಂದಾ ಮತ್ತು ವಾನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಲ್ಲಿನ ಗ್ರಾಪಂ ಅಧ್ಯಕ್ಷರ ಪತ್ರದಂತೆ ಸ್ವಯಂ ಚಾಲಿತ ಮಳೆ ಮಾಪನ ಕೇಂದ್ರಗಳ ವರದಿಯ ಬದಲು ಸಾಮಾನ್ಯ ಮಳೆ ಮಾಪನ ಕೇಂದ್ರದ ವರದಿಯನ್ನು ಇಂದೀಕರಿಸಲಾಗಿದೆ ಎಂದು ಸ್ವತಃ ಕೆಎಸ್‌ಎನ್‌ಡಿಎಂಸಿ ತಿಳಿಸಿದೆ ಎಂದು ಇನ್ಶುರೆನ್ಸ್ ಕಂಪನಿ ಪರ ವಕೀಲರು ವಾದಿಸಿದ್ದರು.