ಬೆಳಗಾವಿ: ತಾಲೂಕಿನ ಬಡೇಕೊಳ್ಳಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಜು. 27ರಿಂದ ಆ. 21ರ ವರೆಗೆ ನಾಗೇಂದ್ರ ಸ್ವಾಮಿಗಳ ಕರ್ತೃ ಗದ್ದುಗೆಗೆ ಹಾಗೂ ಕರೆಮ್ಮಾದೇವಿ ಮತ್ತು ಕಾಳಿಕಾದೇವಿಗೆ ಪ್ರತಿದಿನ ರುದ್ರಾಭಿಷೇಕ, ಪಂಚಾಭಿಷೇಕ, ಅಭಿಷೇಕ ಹಾಗೂ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮಗಳು ನಡೆಯಲಿವೆ. ಆ.22ರಂದು ಪಲ್ಲಕ್ಕಿ ಉತ್ಸವ, 23ರಂದು ರಥೋತ್ಸವ ಸಹ ನಡೆಯಲಿದೆ ಎಂದು ನಾಗಯ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.