ಬಡಾವಣೆಗಳಿಗೆ ಶಾಸಕ ಭೇಟಿ

18Rajesh1
Published on

ಚಾಮರಾಜನಗರ: ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಮಾಡಬೇಕಿರುವ ಕಡೆಗಳಿಗೆ ಸೋಮವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಕರಿನಂಜನಪುರದಿಂದ ಸೋಮವಾರಪೇಟೆ ಸಂಪರ್ಕ ರಸ್ತೆ, ಗಾಳೀಪುರ ಬಡಾವಣೆ, ಗುಂಡ್ಲುಪೇಟೆ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣವಾಗಿರುವೆಡೆ ರಸ್ತೆ ನಿರ್ಮಾಣ ಮಾಡುವ ಕುರಿತಂತೆ ಪರಿಶೀಲಿಸಿದರು. ಇದೇ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನಗರದಲ್ಲಿ ಒಳಚರಂಡಿ ಕಾಮಗಾರಿ ಆಗಿರುವೆಡೆ ರಸ್ತೆ ನಿರ್ಮಾಣವಾಗಿಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಭೇಟಿ ನೀಡಿ, ಎಲ್ಲೆಲ್ಲಿ ರಸ್ತೆಗಳಿಲ್ಲ ಎಂಬುದನ್ನು ಪರಿಶೀಲಿಸಿದ್ದೇನೆ ಎಂದರು. ನಗರಸಭೆ ಸದಸ್ಯ ಆರ್.ಎಂ.ರಾಜಪ್ಪ, ಪಿಡಬ್ಲೂೃಡಿ ಎಇಇ ಶಾಂತಾ, ಮುಖಂಡ ಶ್ರೀನಿವಾಸ್, ಸೈಯದ್ ಇರ್ಷದ್, ಮರಿಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net