

ಚಿಕ್ಕಮಗಳೂರು: ನಾಡು, ನುಡಿ, ವಿಚಾರದಲ್ಲಿ ಅನ್ಯಾಯವಾದಾಗ ಹೋರಾಟ ರೂಪಿಸುವ ಜೊತೆಗೆ ಸಾರ್ವಜನಿಕರ ಕುಂದುಕೊರತೆ ಮತ್ತು ಕಾನೂನು ಅರಿವು ಮೂಡಿಸುವ ಕಾರ್ಯದಲ್ಲಿ ಸಂಘಟನೆ ನಿರತವಾಗಿದೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದರು.
ನಗರದ ಇಂದಿರಾಗಾAಧಿ ಬಡಾವಣೆಯಲ್ಲಿ ಕನ್ನಡಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಡಾವಣೆಗಳಲ್ಲಿ ನಿವಾಸಿಗಳು ಮೂಲಸೌಕರ್ಯದ ಬಗ್ಗೆ ಸಮಸ್ಯೆ ಮುಕ್ತವಾಗಿ ಹಂಚಿಕೊAಡಲ್ಲಿ ಜನಪ್ರತಿನಿಧಿಗಳು, ನಗರಸಭೆ ಆಡಳಿತದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರಸ್ತುತ ವಾರ್ಡಿನಲ್ಲಿ ನಿವಾಸಿಗಳ ಹೇಳಿಕೆ ಪ್ರಕಾರ ದೇವಾಲಯ, ಸಮುದಾಯ ಭವನ ನಿರ್ಮಾಣ, ಗುಣಮಟ್ಟದ ರಸ್ತೆ, ಚರಂಡಿ ಹಾಗೂ ನೀರಿನ ಸೌಲಭ್ಯದ ಅವಶ್ಯಕತೆಯಿದೆ. ಈ ಎಲ್ಲ ಸಮಸ್ಯೆಗಳಿಗೆ ಕನ್ನಡ ಸೇನೆ ಬೆನ್ನುಲುಬಾಗಿ ನಿಲ್ಲುವ ಮೂಲಕ ಸೌಕರ್ಯ ಪೂರೈಸಲು ಹೋರಾಟ ನಡೆಸಲಿದೆ ಎಂದರು.
ಸAಘಟನೆ ಕೇವಲ ಹೋರಾಟ, ಪ್ರತಿಭಟನೆಗೆ ಸೀಮಿತವಾಗದೇ ಸಮಾಜದ ನಾಗರಿಕರಿಗೆ ನೆರವಾಗುವ ಕಾರ್ಯದಲ್ಲಿ ಸದಾಸಿದ್ಧರಿz್ದೆÃವೆ. ಮುಂದಿನ ದಿನಗಳಲ್ಲಿ ನಗರದ ಪ್ರತಿ ವಾರ್ಡಿಗಳಲ್ಲೂ ಕುಂದುಕೊರತೆ ಸಭೆ ನಡೆಸುವ ಮೂಲಕ ನಿವಾಸಿಗಳ ಅಹವಾಲನ್ನು ಸ್ವೀಕರಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಗ್ರಾಮಾಂತರ ಠಾಣೆ ಸಬ್‌ಇನ್ಸ್ಪೆಕ್ಟರ್ ರಾಜೇಶ್ ಮಾತನಾಡಿ, ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಎಲ್ಲರಿಗೂ ಕಾನೂನಿನ ಅರಿವು ಅಗತ್ಯ. ದೈನಂದಿನ ವ್ಯವಹಾರದಲ್ಲಿ ಕಾನೂನಿನ ಚೌಕಟ್ಟಿ ನಲ್ಲಿ ವ್ಯವಹಾರ ನಡೆಸುವ ಮೂಲಕ ಮೋಸ, ವಂಚನೆಗಳಿAದ ಮುಕ್ತರಾಗಬೇಕು. ಇದಕ್ಕೆ ಕಾಯ್ದೆಗಳ ಅರಿವು ಪಡೆದಿರಬೇಕು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತಿಮುಖ್ಯ. ಬಡಾವಣೆಗ ಳಲ್ಲಿ ಅನೈತಿಕ ಚಟುವಟಿಕೆಗಳು ಕಂಡುಬAದಲ್ಲಿ ಪೊಲೀಸರಿಗೆ ತಿಳಿಸಿದರೆ ಮಾಹಿತಿ ನೀಡುವವರ ಹೆಸರನ್ನು ಗುಪ್ತವಾಗಿರಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಸಂಘದ ಅಧ್ಯಕ್ಷ ಜಯಪ್ರಕಾಶ್, ವಕ್ತಾರ ಹುಣಸೇಮಕ್ಕಿ ಲಕ್ಷö್ಮಣ್, ಮುಖಂಡರಾದ ಸತೀಶ್, ಶಂಕರೇಗೌಡ, ರವಿ, ರಮೇಶ್, ಚೈತ್ರ, ನಿವಾಸಿಗಳಾದ ಕುಮಾರ್, ಮಾದೇವು, ವೆಂಕಟೇಶ್, ರಾಮು ಮತ್ತಿತರರು ಉಪಸ್ಥಿತರಿದ್ದರು.