ಬಡವರಿಗೆ ಸಹಾಯಹಸ್ತ ಚಾಚುವುದು ಆದ್ಯ ಕರ್ತವ್ಯ

20240806_171221
Published on

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಬಡವರಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ನಾನಾ ಭಾಗಗಳಲ್ಲಿ ತಂದೆ&ತಾಯಿಯ ಹೆಸರಿನಲ್ಲಿ ಮನೆಗಳನ್ನು ನಿರ್ಮಿಸಿ ನೆಮ್ಮದಿಯ ಬದುಕು ಕಟ್ಟಿಕೊಡಲಾಗುತ್ತಿದೆ. ಬಡವರಿಗೆ ಸಹಾಯಹಸ್ತ ಚಾಚುವುದು ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.


ಸಮಾನ ಮನಸ್ಕರ ತಂಡದ ವತಿಯಿಂದ ಕುಂಜಿಬೆಟ್ಟು ಡಿಸಿಎಂ ಕಾಲೊನಿ ನಿವಾಸಿ ಬೇಬಿ ಸಾಲಿಯಾನ್​ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಉದ್ಘಾಟಿಸಿ ಮಾತನಾಡಿದರು.


ಅಪರ ಜಿಲ್ಲಾಧಿಕಾರಿ ಮಮತಾದೇವಿ ಮಾತನಾಡಿ, ಸರ್ಕಾರದಿಂದ ವಸತಿ ರಹಿತರಿಗೆ ಅನೇಕ ಸೌಲಭ್ಯಗಳು ಲಭಿಸುತ್ತಿದ್ದು, ಸಮಾನ ಮನಸ್ಕರ ತಂಡ ದಾನಿಗಳ ನೆರವಿನಿಂದ 24 ಮನೆಗಳನ್ನು ನಿರ್ಮಿಸಿದ್ದು, ಇತರ ಸಂ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಸಾಲ್ಯ ಟ್ರಸ್ಟ್​ ಪ್ರವರ್ತಕಿ ನಿರುಪಮಾ ಪ್ರಸಾದ್​ ಶೆಟ್ಟಿ, ಚಿನ್ನ&ಬೆಳ್ಳಿ ಕೆಲಸಗಾರರ ಸಂದ ಅಧ್ಯಕ್ಷ ರವಿಚಂದ್ರ ಆಚಾರ್ಯ, ದಾನಿ ಶ್ರೀನಿವಾಸ ರಾವ್​, ಸಮಾನ ಮನಸ್ಕರ ತಂಡದ ಸಂಚಾಲಕ ಶಶಿಧರ್​ ಪುರೋಹಿತ್​ ಉಪಸ್ಥಿತರಿದ್ದರು. ವೆಂಕಟೇಶ ಆಚಾರ್ಯ ಸ್ವಾಗತಿಸಿ, ಪ್ರತಿಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net