ಬಡವರಿಗೆ ನಿವೇಶನ ಹಂಚಿಕೆ ಮಾಡಲು ಆಗ್ರಹ

Untitled design (3)
ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ವಸತಿ ನಿರಾಶ್ರಿತರು ಬುಧವಾರ ಸತ್ಯಾಗ್ರಹ ನಡೆಸಿದರು. ಸಂಘದ ಅಧ್ಯಕ್ಷ ಡಿ.ಎಚ್. ಪೂಜಾರ, ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ತಾಲೂಕು ಅಧ್ಯಕ್ಷ ರಮೇಶ ಪಾಟೀಲ, ಉಪಾಧ್ಯಕ್ಷ ಚಿಟ್ಟಿಬಾಬು ಇತರರಿದ್ದರು.
Published on

ಸಿಂಧನೂರು:ತಾಲೂಕಿನ ಸೋಮಲಾಪುರ ಗ್ರಾಮದ (ಬೂದಿವಾಳ ಕ್ಯಾಂಪ್) ಸರ್ವೇ ನಂ.71/ ಹಿಸ್ಸಾ 3 ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಸರ್ಕಾರಿ ಭೂಮಿಯಲ್ಲಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಸತಿ ನಿರಾಶ್ರಿತರು ಬುಧವಾರ ಸತ್ಯಾಗ್ರಹ ನಡೆಸಿದರು.


ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ ಮಾತನಾಡಿ, ಬೂದಿವಾಳ ಕ್ಯಾಂಪ್‌ನ ಸರ್ಕಾರಿ ಭೂಮಿಯನ್ನು ಆಂಧ್ರದ ವ್ಯಕ್ತಿ ಖಾಸಗಿ ಅಗ್ರಿಮೆಂಟ್ ಮಾಡಿಕೊಂಡು ಕೋರ್ಟ್ ಮೊರೆ ಹೋಗಿದ್ದಾನೆ.

ತಹಸೀಲ್ದಾರ್ ಸರಿಯಾದ ದಾಖಲಾತಿ ಸಲ್ಲಿಸಿದ್ದರೆ ಕೇಸ್ ವಜಾಗೊಳ್ಳುತಿತ್ತು. ಆದರೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಕರ್ನಾಟಕ ರೈತ ಸಂಘ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಿದೆ ಎಂದರು.


ರೌಡಕುಂದ ಗ್ರಾಮದ ಸರ್ವೇ ನಂ.244 ಸರ್ಕಾರಿ ಇನಾಮ್ ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ತಹಸೀಲ್ದಾರ್, ಕಂದಾಯ ಅಧಿಕಾರಿಗಳು ಗುಲ್ಬರ್ಗಾ ಹೈಕೋರ್ಟ್‌ಗೆ ಸಲ್ಲಿಸದ ಕಾರಣ 32 ಎಕರೆ ಭೂಮಿ ಉಳ್ಳವರ ಪಾಲಾಗಿದೆ.

ತಾಲೂಕಿನ ಹಲವು ಭೂ ಮಾಫಿಯಾಗಳು ಮತ್ತು ಬಲಿಷ್ಠರು ಸರ್ಕಾರಿ ಭೂಮಿಗೆ ನಕಲಿ ದಾಖಲಾತಿ ಸೃಷ್ಟಿಸಿ ನೂರಾರು ಎಕರೆ ಭೂಮಿ ಕಬಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರಿಗೆ ಹೋರಾಟ ಮುಂದುವರಿಯುತ್ತದೆ ಎಂದರು.
ಮಸ್ಕಿ ತಾಲೂಕು ಕಾರ್ಯದರ್ಶಿ ಯಮನೂರಪ್ಪ, ಪ್ರಮುಖರಾದ ಟಿ. ರಾಜಶೇಖರ, ಲಿಂಗಪ್ಪ ಚಿಕ್ಕ ಬೇರ್ಗಿ, ವೀರೇಶ ಬೇರಿಗಿ, ಅಂಬಮ್ಮ, ಯಲ್ಲಮ್ಮ, ಜಯಪ್ಪ, ನಾಗಮ್ಮ, ಹೊನ್ನಮ್ಮ, ಪೃಥ್ವಿರಾಜ, ಕಾಶಿ ವಿಶ್ವನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net