ಬಡವರಿಗೆ ಅಗತ್ಯ ಸಾಮಗ್ರಿ ಕಿಟ್ ವಿತರಣೆ

11 YLP 02
Published on

ಯಲ್ಲಾಪುರ: ಪಟ್ಟಣದ ಎಪಿಎಂಸಿ ಆವಾರದಲ್ಲಿ ಬಡವರಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಆಯಾ ವಾರ್ಡ್​ಗಳ ಸದಸ್ಯರ ಮೂಲಕ ವಿತರಿಸಿದರು.

ಎಪಿಎಂಸಿ ಆವಾರದ ವಿವಿಧ ಅಡಕೆ ವಕಾರಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ವಿುಕರು ಹಾಗೂ ಹಮಾಲರಿಗೆ ಅಡಕೆ ವ್ಯವಹಾರಸ್ಥರ ಸಂಘದಿಂದ ನೀಡಿದ ತಲಾ ಒಂದು ಸಾವಿರ ರೂ. ಗಳ ಸಹಾಯಧನವನ್ನು ಸಾಂಕೇತಿಕವಾಗಿ ಸಚಿವರು ವಿತರಿಸಿದರು. ಅಡಕೆ ವ್ಯವಹಾರಸ್ಥರ ಸಂಘದಿಂದ ಕಾರ್ವಿುಕರು ಹಾಗೂ ಹಮಾಲರಿಗೆ ಒಟ್ಟು 6.87 ಲಕ್ಷ ರೂ.ಗಳ ಧನ ಸಹಾಯ ಹಾಗೂ 1 ಲಕ್ಷ ರೂ. ಮೌಲ್ಯದ ಅಗತ್ಯ ಸಾಮಗ್ರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಡಿ.ಜಿ. ಹೆಗಡೆ, ಅಡಕೆ ವ್ಯವಹಾರಸ್ಥರ ಸಂಘದ ಪ್ರಮುಖರಾದ ಎಂ.ಆರ್. ಹೆಗಡೆ, ರವಿ ಶಾನಭಾಗ, ನರಸಿಂಹಮೂರ್ತಿ ಭಟ್ಟ, ನಾಗೇಶ ಭಾಗ್ವತ, ಪ.ಪಂ. ಸದಸ್ಯರಾದ ಸೋಮೇಶ್ವರ ನಾಯ್ಕ, ಆದಿತ್ಯ ಗುಡಿಗಾರ, ಸತೀಶ ನಾಯ್ಕ, ಪ್ರಶಾಂತ ತಳವಾರ, ಪ್ರಮುಖರಾದ ವಿಜಯ ಮಿರಾಶಿ, ಶಿರೀಷ ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net