ಬಡವರ ಹಸಿವು ನೀಗಿಸಿದ್ದ ಧೀಮಂತ ನಾಯಕ

CTD 6 BABUJI CONGRESS--02
Published on


ಚಿತ್ರದುರ್ಗ: ಹಸಿರು ಕ್ರಾಂತಿಯ ಹರಿಕಾರ,ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ದೂರದೃಷ್ಟಿ,ದಕ್ಷ ಆಡಳಿತದಿಂದಾಗಿ ದೇಶವಿಂದು ಆಹಾರ ಸ್ವಾವಲಂಬನೆಯ ಸಾಧನೆಗೆ ಕಾರಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಬಾಬೂಜಿ ಅವರ 37ನೇ ಪುಣ್ಯಸ್ಮರಣೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿದ್ದ 33 ಕೋಟಿ ಜನರಿಗೆ ಹಸಿವು ನೀಗಿಸಲು ಅಮೆರಿಕದಿಂದ ಕೆಂಪುಜೋಳ,ಗೋಧಿ ತರಿಸಿ ಬಡವರಿಗೆ ವಿತರಿಸುವಂಥ ದೂರದೃಷ್ಟಿ ಅವರಲ್ಲಿ ಇತ್ತು.

ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಕೇಂದ್ರ ಸಚಿವರಾಗಿ ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಜಗಜೀವನರಾಂ ಅವರು ದಲಿತರೆನ್ನುವ ಕಾರಣಕ್ಕೆ ಪ್ರಧಾನಿ ಹುದ್ದೆಯಿಂದ ವಂಚಿತರಾದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ,ಎಐಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದ ಹಾಗೂ ಕೇಂದ್ರ ಸಚಿವರಾಗಿ ದೇಶಕ್ಕೆ ದಕ್ಷ ಆಡಳಿತ ನೀಡಿದ್ದ ಜಗಜೀವನರಾಂ,ದಲಿತರು,ಹಿಂದುಳಿದವರು,ಶೋಷಿತರ ಪರವಾಗಿ ಹೋರಾಡಿದ ಧೀಮಂತ ನಾಯಕನೆಂದು ಸ್ಮರಿಸಿದರು.

ಕೆ.ಪಿ.ಸಂಪತ್‌ಕುಮಾರ್,ಬಿ.ಜಿ.ಶ್ರೀನಿವಾಸ್,ಜಿ.ಎಸ್.ಕುಮಾರ್‌ಗೌಡ,ರವಿಕುಮಾರ್,ಅನಿಲ್‌ಕುಮಾರ್,ಎನ್.ಡಿ.ಕುಮಾರ್,ಶಬ್ಬೀರ್,ನಾಗ ರಾಜ್‌ಪೈಲೆಟ್,ಮಂಜು,ಮೂಡಲಗಿರಿಯಪ್ಪ,ಸುದರ್ಶನ್,ನೇತ್ರಾವತಿ,ಸೈಯದ್‌ಅಫಾಖ್ ಅಹಮದ್,ಭರತ್,ರಹಮತ್‌ವುಲ್ಲಾ ಮತ್ತಿತರ ಪಕ್ಷದ ಪದಾಧಿಕಾರಿಗಳು,ಕಾರ‌್ಯಕರ್ತರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net