ಚಿತ್ರದುರ್ಗ: ಬಡವರ ಸಮಸ್ಯೆಗಳನ್ನರಿತು ಅವುಗಳ ನಿವಾರಣೆಗೆ ಶ್ರಮಿಸುವಂತೆ ರೋಟರಿ ಕ್ಲಬ್ ಪದಾಧಿಕಾರಿಗಳಿಗೆ ರೋ.ಅವಿನಾಶ್ ಪೋದ್ದಾರ್ ಸಲಹೆ ನೀಡಿದರು. ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಬಾಲಭವನದಲ್ಲಿ ಶನಿವಾರ ಏರ್ಪಡಿಸಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಬಡವರ ಸೇವೆ ಮೂಲಕ ಸಂತೋಷವನ್ನು ಕಂಡುಕೊಳ್ಳಿ. ರೋಟರಿ ಸಂಸ್ಥೆ ಉತ್ತಮ ವ್ಯಕ್ತಿತ್ವದ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು. ಮಹಾನಂದಿ ಸುರೇಶ್ ಮಾತನಾಡಿ, ಸಂಸ್ಥೆಯಿಂದ ಸ್ಥಾಪಿಸುತ್ತಿರುವ ಡಯಾಲಿಸಿಸ್, ಫಿಜಿಯೋಥೆರಪಿ ಕೇಂದ್ರಗಳ ಸೇವೆ ಜನರಿಗೆ ಶೀಘ್ರ ತಲುಪಲಿ ಎಂದು ಹೇಳಿದರು. ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಸ್.ಕನಕರಾಜು ಮಾತನಾಡಿ, ನಗರದ ಚಳ್ಳಕೆರೆ ರಸ್ತೆಯಲ್ಲಿ ಸ್ಥಾಪಿಸುತ್ತಿರುವ ಅಂದಾಜು 3 ಕೋಟಿ ರೂ. ವೆಚ್ಚದ ಡಯಾಲಿಸಿಸ್ ಕೇಂದ್ರ ಶೀಘ್ರ ಕಾರ್ಯಾರಂಭವಾಗಲಿದೆ ಎಂದರು. ವಿಕ್ರಾಂತ್ ಜೈನ್, ಮಾಧುರಿ ಮಧು ಪ್ರಸಾದ್, ಜಯಶ್ರೀಷಾ, ಉಮೇಶ್ ತೊಪ್ಪದ್, ಕೆ.ಮಧುಪ್ರಸಾದ್, ಎಂ.ಕೆ.ರವೀಂದ್ರ ಇತರರು ಉಪಸ್ಥಿತರಿದ್ದರು. (ಸಿಟಿಡಿ 2 ರೋಟರಿ) ಚಿತ್ರದುರ್ಗದಲ್ಲಿ ಶನಿವಾರ ಏರ್ಪಡಿಸಿದ್ದ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವಿನಾಶ್ ಪೊದ್ದಾರ್, ಬಿ.ಎಸ್.ಕನಕರಾಜು, ಮಹಾನಂದಿ ಸುರೇಶ್, ಜಯಶ್ರೀಷಾ, ವಿಕ್ರಾಂತ್ ಜೈನ್, ಎಂ.ಕೆ.ರವೀಂದ್ರ ಇದ್ದರು.