ಬಡವರ ಪರವಾದ ಸರ್ಕಾರ ನಮ್ಮದು

ayodhyanagar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ರಾಜ್ಯಾದ್ಯಂತ ಮನೆಗಳ ಹಕ್ಕು ಪತ್ರ ವಿತರಿಸುವ ಕಾರ್ಯ ಹಂತ ಹಂತವಾಗಿ ನಡೆಯುತ್ತಿದೆ. ಬಡವರ ಪರವಾದ ಸರ್ಕಾರ ನಮ್ಮದು. ಜನರ ಸೇವೆ ಮಾಡಲು ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಸ್ಲಮ್ ಬೋರ್ಡ್ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಭಾನುವಾರ ಅಯೋಧ್ಯಾ ನಗರ, ಅಂಬೇಡ್ಕರ್ ಕಾಲನಿಯ 138ಮನೆಗಳಿಗೆ ಹಕ್ಕುಪತ್ರ ಮತ್ತು ಇ-ಆಸ್ತಿ ಪ್ರಮಾಣಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಸ್ಲಮ್ಳ ಮತ್ತು ಆಶ್ರಯ ಬಡಾವಣೆಗಳ ಎಲ್ಲ ಅರ್ಹ ಫಲಾನುಭವಿಗಳಿಗೆ ಹಕ್ಕಪತ್ರಗಳ ವಿತರಣೆ ಈಗಾಗಲೇ ಆರಂಭವಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಕಾನೂನು ಚೌಕಟ್ಟಿನಲ್ಲಿಯೇ ಹಂತಹಂತವಾಗಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಪೂರ್ವ ಕ್ಷೇತ್ರದಲ್ಲೇ 40ಕ್ಕೂ ಅಧಿಕ ಸ್ಲಮ್ಳಿವೆ. ಇದುವರೆಗೂ ಯಾರೊಬ್ಬರೂ ಈ ಭಾಗದ ಜನರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿರಲಿಲ್ಲ. ಇಂದು ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಅವರನ್ನು ಮನೆಯ ನಿಜವಾದ ಮಾಲೀಕರನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಎಸ್​ಸಿಎಸ್​ಪಿ/ ಟಿಎಸ್​ಪಿ ಹಣದ ಬಗ್ಗೆ ಮಾತನಾಡುವ ಬಿಜೆಪಿಯವರು ಮೊದಲು ಕೇಂದ್ರದಲ್ಲಿ ಎಸ್​ಸಿಎಸ್​ಪಿ /ಟಿಎಸ್​ಪಿ ಕಾಯ್ದೆ ಜಾರಿಗೆ ತರಲಿ. 50 ಲಕ್ಷ ಕೋಟಿಗೂ ಅಧಿಕ ಬಜೆಟ್ ಘೊಷಣೆ ಮಾಡುವ ಕೇಂದ್ರ ಸರ್ಕಾರ ಶೇ. 25ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾಜಕ್ಕೆ ಎಷ್ಟು ಹಣ ಮೀಸಲಿಟ್ಟಿದೆ? ನಿಮಗೆ ನಾಚಿಕೆ ಆಗಬೇಕು. ಕ್ರಿಯಾ ಯೋಜನೆಯಲ್ಲಿ ಕೇವಲ ಶೇ. 5.5ರಷ್ಟು ಹಣ ಮೀಸಲಿಟ್ಟಿರಿ. ಖರ್ಚು ಮಾಡುತ್ತಿರುವುದು ಕೂಡ ಅಷ್ಟಕಷ್ಟೆ. ನಿಮ್ಮಿಂದ ಬುದ್ಧಿ ಕಲಿಯಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರಾದ ಬೀಬಿ ಮರಿಯಮ್ ಸ್ಲಮ್ ಬೋರ್ಡ್ ಅಧಿಕಾರಿ ಪ್ರವೀಣಕುಮಾರ, ಮುಖಂಡರಾದ ಸೈಯದ ಸಲೀಂ ಮುಲ್ಲಾ, ಪ್ರಭು ಪ್ರಭಾಕರ, ಅಲ್ತಾಫ್ ಮುಲ್ಲಾ, ಕಮಲವ್ವ ಹೊಸಮನಿ, ಶಿವಾನಂದ ದೊಡ್ಡಮನಿ, ಪರಮೇಶ ಕಾಳೆ, ಗಣೇಶ ದೊಡ್ಡಮನಿ, ಶ್ರೀಶೈಲ ಚಲವಾದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net