ಬಡವರ ಪರ ಗಟ್ಟಿ ಧ್ವನಿಯಾದ ಅರಸು

PH 01
Published on

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ, ಧೀಮಂತ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಟದಳ ಸಮರ್ಪಿಸುವ ಮೂಲಕ ಆಚರಿಸಲಾಯಿತು. 

ಬಸವರಾಜ ಹೆಳವರ ಯಾಳಗಿ ಅರಸುರವರ ಸಾಧನೆಗಳ ಕುರಿತು ಮಾತನಾಡಿ, ಅರಸು ಅವರು ತಳ ಸಮುದಾಯದ ಏಳಿಗೆಗೆ ಶ್ರಮಿಸಿದವರು. ನೊಂದವರ ಧ್ವನಿಯಾಗಿ, ನಿರಾಶ್ರಿತರಿಗೆ ಆಶ್ರಯ ಕೊಟ್ಟು, ಕೆಳವರ್ಗದವರ ಬಾಳಿಗೆ ಬೆಳಕಾದವರು. ಉಳುವವರನ್ನು ಹೊಲದೊಡೆಯರನ್ನಾಗಿ ಮಾಡಿದವರು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತಾಗಲಿ ಎಂದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೀತಿ ಪಾಠದ ಪುಸ್ತಕಗಳನ್ನು ವಿತರಿಸಲಾಯಿತು. ಅವಿನಾಶ ಹೆಳವರ, ಸುದಿಕ್ಷಾ, ಸಾಯಿಸಮರ್ಥ, ಸುಪ್ರೀತ್‌, ಸುಮೀತ್ ಸಂಪ್ರೀತ್ ಇನ್ನಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net