

ಬೈಲಹೊಂಗಲ: ದೇವರಾಜ ಅರಸು ಅವರು ನೊಂದವರ ಪರವಾಗಿ ಆಡಳಿತ ನೀಡಿದ ಶ್ರೇಷ್ಠ ರಾಜಕಾರಣಿ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಪಟ್ಟಣದ ಧಾರವಾಡ ಬೆಪಾಸ್ ರಸ್ತೆಯಲ್ಲಿರುವ ದೇವರಾಜ ಅರಸು ಭವನದಲ್ಲಿ ತಾಲೂಕಾಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪುರಸಭೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮದಿನದ ಸಮಾರಂಭದಲ್ಲಿ ಮಾತನಾಡಿದರು. ಕರ್ನಾಟಕದ ಸಮಗ್ರ ಅಭಿವೃದ್ಧಿ ಕನಸು ಕಂಡಿದ್ದ ಅರಸು ಅಧಿಕಾರಶಾಹಿ ರಾಜಕಾರಣದ ವರಸೆ ಬದಲಿಸಿದ ನಾಯಕ ಎಂದರು.
ಚನ್ನವಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಅರಸು ಅವರು ಬಡವರು ಪರ ರೂಪಿಸಿದ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಕನ್ನಡಿಗರ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಅವರ ಆದರ್ಶಗಳನ್ನು ರಾಜಕಾರಣಿಗಳು ಅಳವಡಿಸಿಕೊಂಡು ನಾಡು ಕಟ್ಟಲು ಶ್ರಮಿಸಬೇಕು ಎಂದರು.
ಕೆಎಲ್ಇ ಕಾಲೇಜಿನ ಉಪನ್ಯಾಸಕಿ ಸವಿತಾ ರೊಟ್ಟಿ, ಮರಡಿ ಬಸವೇಶ್ವರ ಪ್ರೌಢಶಾಲೆ ಶಿಕ ಎಂ.ಬಿ. ಕಾಳೆ ಉಪನ್ಯಾಸ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರಾಜ ಅರಸು ಭಾವಚಿತ್ರದ ಮೆರವಣಿಗೆ ನಡೆಯಿತು. ಡೊಳ್ಳಿನ ಮಜಲು, ಸಕಲ ವಾದ್ಯಮೇಳಗಳು ಮೆರವಣಿಗೆ ಕಳೆ ಹೆಚ್ಚಿಸಿದವು. ಎಸ್ಎಸ್ಎಲ್ಸಿ, ಪಿಯುಸಿ ಪರೀೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಜಿಲ್ಲಾಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಲಹೊಂಗಲ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ತಹಸೀಲ್ದಾರ್ ಹನುಮಂತ ಶಿರಹಟ್ಟಿ, ತಾಪಂ ಇಒ ಸುಭಾಷ ಸಂಪಗಾಂವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಶಾಂತಾ ಮರಿಗೌಡರ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಗಂಗಪ್ಪ ಭರಮಣ್ಣವರ, ಸಮಾಜ ಕಲ್ಯಾಣಾಧಿಕಾರಿ ಕಲಾವತಿ ದೇಶನೂರ, ಶ್ರೀಕಾಂತ ಗಾಂವಿ, ಸುರೇಶ ಕೋಟಗಿ, ದೇಮಪ್ಪ ಹಜೇರಿ, ಮಂಜುನಾಥ ಕರಿಸಿರಿ, ಗೌರಿ ಮುದಕನಗೌಡರ, ಪವನ ಬೋಳೆತ್ತಿನ, ಲಲಿತಾ ಗೊರಗುದ್ದಿ ಇತರರಿದ್ದರು.