ಬಡವರ ಕಲ್ಯಾಣ ಯೋಜನೆಗಳು ನಿರಂತರ

TKE mmm
ಲಕ್ಕವಳ್ಳಿಯಲ್ಲಿ ಮನಮೋಹನ್ ಸಿಂಗ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಲ್.ಟಿ.ಹೇಮಣ್ಣ ಎಲ್.ಎನ್.ರಮೇಶ್,ಪ್ರಕಾಶಾನಂದ, ಸಿ.ಸೋಮಶೇಖರ್ ಇತರರಿದ್ದರು.
Published on

ತರೀಕೆರೆ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸಾವು ತೀವ್ರ ನೋವು ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಲ್.ಟಿ.ಹೇಮಣ್ಣ ಸಂತಾಪ ವ್ಯಕ್ತಪಡಿಸಿದರು.

ಲಕ್ಕವಳ್ಳಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಬಡತನದ ಅರಿವಿದ್ದ ಮನಮೋಹನ್ ಸಿಂಗ್ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಉದಾರ ಆರ್ಥಿಕ ನೀತಿಯಿಂದ ದೇಶವನ್ನು ಅಗ್ರಪಂಥಿಗೆ ಕೊಂಡೊಯ್ಯುವ ಪ್ರಯತ್ನ ಜಾರಿಗೊಳಿಸಿದ್ದರು. ಅವರ ನಿಧನದಿಂದ ದೇಶ ಬಡವಾಗಿದೆ ಎಂದರು.

ಲಕ್ಕವಳ್ಳಿ ಗ್ರಾಮಜ್ಯೋತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಸಂಸ್ಥೆ ಗೌರವಾಧ್ಯಕ್ಷ ಕೆ.ರವಿಕಿಶೋರ್ ಅವರು ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಗ್ರಾಮಜ್ಯೋತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಲ್.ಎನ್.ರಮೇಶ್, ಕಾರ್ಯದರ್ಶಿ ಎಲ್.ಎಸ್.ನಾಗೇಶರಾವ್ ಜಾಧವ್, ಟಿ.ಎಸ್.ಪ್ರಕಾಶಾನಂದ, ಸಿ.ಸೋಮಶೇಖರ್, ವೆಂಕಟರಾಜು, ಮಣಿಕಂಠ, ವೆಂಕಟಸ್ವಾಮಿ, ಜಗದೀಶ್ ಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net