

ವೀರೇಶ ಹಾರೊಗೇರಿ ಕಲಘಟಗಿ
ಕರೊನಾ ಲಾಕ್ಡೌನ್ನಿಂದ ಒಪ್ಪೊತ್ತಿನ ಊಟಕ್ಕೂ ಪರದಾಡá-ತ್ತಿರá-ವ ಬಡವರಿಗೆ ಸರ್ಕಾರ ಉಚಿತವಾಗಿ ಅ್ಕ ತೊಗರಿಬೇಳೆ ವಿತರಿಸುತ್ತಿದೆ. ಆದರೆ, ಮಧ್ಯರ್ವಗಳು ಪಡಿತರ ವಿತರಿಸá-ವಾಗ ತೂಕದಲ್ಲಿ ವಂಚಿಸá-ತ್ತಿರá-ವುದರಿಂದ ಬಡವರ ಅನ್ನಕ್ಕೂ ಕತ್ತರಿ ಬೀಳುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ತಾಲೂಕಿನಾದ್ಯಂತ ಪಡಿತರ ಚೀಟಿದಾರರಿಗೆ ವಿತರಿಸಲು 13,812.90 ಕ್ವಿಂಟಾಲ್ ಅಕ್ಕಿ, 417.84 ಕ್ವಿಂಟಾಲ್ ತೊಗರಿಬೇಳೆ ದಾಸ್ತಾನು ಮಾಡಲಾಗಿದೆ. ತಾಲೂಕಿನಲ್ಲಿ ಅಂತ್ಯೋದಯ 5,012 ಚೀಟಿಗಳಿಗೆ 18.254 ಯೂನಿಟ್, ಆದ್ಯತಾ ಕುಟುಂಬ (ಬಿಪಿಎಲ್)ನ 36,672 ಚೀಟಿಗಳಿಗೆ 1,19,875 ಯುನಿಟ್ ಪಡಿತರ ಧಾನ್ಯ ವಿತರಿಸಬೇಕಿದೆ.
ತಾಲೂಕಿನಲ್ಲಿ 27 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಸ್ಥಳೀಯ ಸಂಸ್ಥೆಯ 7, ಯುವತಿ ಹಾಗೂ ಯುವಕ ಮಂಡಳಗಳ 7, ವೈಯಕ್ತಿಕ 11 ಸೇರಿ 52 ನ್ಯಾಯಬೆಲೆ ಅಂಗಡಿಗಳ ಮೂಲಕ ಆಯಾ ಭಾಗದ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ಹಂಚಲಾಗá-ತ್ತದೆ.
ಮೇ 4ರಿಂದ ತಾಲೂಕಿನಲ್ಲಿ ವಿತರಿಸಿದ ಪಡಿತರ ಧಾನ್ಯಗಳ ತೂಕದಲ್ಲಿ ಸಾಮೂಹಿಕವಾಗಿ ಕಡಿತಗೊಳಿಸಿ ವಂಚಿಸುತ್ತಿದ್ದಾರೆ ಎಂಬುದು ತಾಲೂಕಿನ ಬಹುತೇಕ ಗ್ರಾಮಗಳ ಫಲಾನುಭವಿಗಳ ಆರೋಪ. ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ಈ ಅವ್ಯವಹಾರ ನಡೆಯá-ತ್ತಿದೆ. ಮೇ 5ರಂದು ಬೇಗೂರ ಗ್ರಾಮದ ಅಜ್ಜಿಯೊಬ್ಬಳಿಗೆ 10 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ ವಿತರಿಸಲಾಗಿತ್ತು. ಆದರೆ, ಬೇರೆ ಅಂಗಡಿಯಲ್ಲಿ ತೂಕ ಮಾಡಿದಾಗ 1 ಕೆಜಿ ಅಕ್ಕಿ, 124 ಗ್ರಾಂ ತೊಗರಿಬೇಳೆ ಕಡಿಮೆಯಾಗಿದೆ.
ಪ್ರತಿ ಕಾರ್ಡ್ನಿಂದ 1-2 ಕೆಜಿ ಅಕ್ಕಿ, 100-150 ಗ್ರಾಂ ತೊಗರಿಬೇಳೆಯನ್ನು ತೂಕದಲ್ಲಿ ಕಡಿತಗೊಳಿಸಿ ವಿತರಕರು ಫಲಾನುಭವಿಗಳಿಗೆ ವಂಚಿಸá-ತ್ತಿದ್ದಾರೆ. ನಮ್ಮೆದá-ರಿಗೆ ಅಕ್ಕಿ, ಬೇಳೆ ತೂಕ ಮಾಡಿ ನಮ್ಮ ಚೀಲಗಳಿಗೆ ಹಾಕá-ತ್ತಾರೆ. ಅದೇ ಚೀಲವನ್ನು ಬೇರೆ ತಕ್ಕಡಿಯಲ್ಲಿ ತೂಗಿದಾಗ 1ರಿಂದ 2 ಲೋ ಕಡಿಮೆ ಅ್ಕ ಬರá-ತ್ತದೆ. ಇದರಿಂದ ಪ್ರತಿ ತಿಂಗಳು 2-3 ಕೆಜಿ ಆಹಾರ ಧಾನ್ಯಗಳು ಕಡಿಮೆ ವಿತರಿಸá-ತ್ತಾ ಬಂದಿದ್ದಾರೆ. ತೂಕದ ತಕ್ಕಡಿಯನ್ನು ಅಧಿಕಾರಿಗಳು ಪ್ರತಿ ತಿಂಗಳು ಬಂದು ತಪಾಸಣೆ ಮಾಡಬೇಕು ಎಂಬá-ದು ಬೇಗೂರ ಗ್ರಾಮಸ್ಥರ ಆಗ್ರಹ.
ಆಹಾರ ಧಾನ್ಯ ಯಾರಿಗೆಷ್ಟು?: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಅಂತ್ಯೋದಯ, ಆದ್ಯತಾ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ, ಪ್ರತಿಯೊಂದು ಕಾರ್ಡ್ಗೆ 1 ಕೆಜಿ ತೊಗರಿಬೇಳೆ ಹಾಗೂ ಆದ್ಯತೇತರ ಚೀಟಿದಾರರ (ಎಪಿಎಲ್) ಕುಟುಂಬದವರಿಗೆ ಪ್ರತಿ ಕೆಜಿಗೆ 15 ರೂ. ಪಡೆದು ಏಕವ್ಯಕ್ತಿ ಪಡಿತರ ಚೀಟಿಗೆ 5 ಕೆಜಿ ಅಕ್ಕಿ, ಎರಡು ಸದಸ್ಯರ ಮೇಲ್ಪಟ್ಟ ಪಡಿತರ ಚೀಟಿಗೆ 10 ಕೆಜಿಯಂತೆ ವಿತರಿಸಲಾಗá-ತ್ತಿದೆ.
ಸರ್ಕಾರದಿಂದ ಕೊಡಮಾಡಿದ ಕೆಲ ಅಕ್ಕಿ ಚೀಲಗಳ ತೂಕ ಕಡಿಮೆ ಇರುತ್ತದೆ. ಕೇಂದ್ರಗಳಲ್ಲಿ ಆಹಾರ ಧಾನ್ಯವನ್ನು ವಿತರಿಸುವಲ್ಲಿ ತೂಕ ಕಡಿಮೆ ಮಾಡುವುದಿಲ್ಲ. ದಾಸ್ತಾನು ಮಳಿಗೆಗಳಿಂದ ಪಡಿತರ ಧಾನ್ಯಗಳನ್ನು ತರುವಾಗಲೇ ಸೋರಿಕೆಯಾಗುತ್ತಿದೆ. ಅದನ್ನು ಸರಿಪಡಿಸಲು ತೂಕದಲ್ಲಿ ಕಡಿತಗೊಳಿಸಲಾಗುತ್ತಿದೆ.| ಎಸ್.ಐ. ಬೋಳಣ್ಣವರ, ಮುಖ್ಯ ಕಾರ್ಯನಿರ್ವಾಹಕ, ಕೃಷಿ ಪತ್ತಿನ ಸಹಕಾರ ಸಂಘ, ಬೇಗೂರ ಗ್ರಾಮ
ಪಡಿತರ ಧಾನ್ಯ ವಿತರಕರು ತೂಕದಲ್ಲಿ ವಂಚಿಸುವಂತಿಲ್ಲ. ಸರ್ಕಾರ ನಿಗದಿಪಡಿಸಿದ ಪ್ರಮಾಣವನ್ನು ಆಯಾ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸುವುದು ಕಡ್ಡಾಯ. ಆರೋಪಗಳು ಸಾಬೀತಾದಲ್ಲಿ ಅಂಥವರ ವಿರá-ದ್ಧ ಕಾನೂನು ಕ್ರಮ ಜರುಗಿಸಲಾಗುವುದು.| ಆರ್.ಎಸ್. ಬೆಂಗಳೂರಕರ್, ತಾಲೂಕು ಆಹಾರ ನೀರಿಕ್ಷಕ, ಕಲಘಟಗಿ